ಉಡುಪಿ, ಜು 19: ಪಟ್ಟದ ದೇವರ ವಿವಾದದ ಸಂದರ್ಭದಲ್ಲಿ ನನ್ನೊಂದಿಗೆ ಚರ್ಚಿಸಲು ಬಂದಿದ್ದ ಶಿರೂರು ಸ್ವಾಮೀಜಿ ನನ್ನ ಜೀವಕ್ಕೆ ಅಪಾಯ ಇದೆ ಎಂದು ಸ್ವಾಮೀಜಿ ಹೇಳಿಕೊಂಡಿದ್ದರು ಎಂದುಸ್ವಾಮೀಜಿ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ.
ಪಟ್ಟದ ದೇವರು ಹಿಂತಿರುಗಿಸುವ ವಿಚಾರವಾಗಿ ಪುತ್ತಿಗೆ ಸ್ವಾಮೀಜಿ ಯನ್ನು ಹೊರತುಪಡಿಸಿ ಉಳಿದ 6 ಸ್ವಾಮೀಜಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು ಎಂದಿದ್ದಾರೆ. ಇದೇ ವೇಳೆ ಶಿರೂರು ಶ್ರೀಗಳ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು. ಶವ ಪರೀಕ್ಷೆ ನಡೆಯಬೇಕು ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಆಗ್ರಹಿಸಿದ್ದಾರೆ. ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಶಿರೂರು ಶ್ರೀಗಳ ಪರ ಕೇವಿಯಟ್ ಸಲ್ಲಿಸಿದ್ದರು.