ಉಡುಪಿ, ಜು 19: ಪೆರ್ಣಂಕಿಲ ಪಂಚಾಯತ್ನ ಗುಂಡುಪಾದೆ ಎಂಬಲ್ಲಿ ವಿದ್ಯುತ್ ತಂತಿ ಸ್ವರ್ಶಿಸಿ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ಜು 19 ರ ಗುರುವಾರ ಮುಂಜಾನೆ 6.30 ಕ್ಕೆ ಈ ದುರ್ಘಟನೆ ನಡೆದಿದೆ.
ನಿನ್ನೆಯಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಯ ಹಿನ್ನಲೆಯಲ್ಲಿ ಮನೆಯಂಗಳದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಇದನ್ನು ಗಮನಕ್ಕೆ ಬಾರದೆ ಸ್ವರ್ಶಿಸಿದ ಹಿನ್ನಲೆಯಲ್ಲಿ ತಾಯಿ ಗೋಪಿ ಬಾಯಿ (85) ಮತ್ತು ಸುಮತಿ (50) ಮೃತಪಟ್ಟಿದ್ದಾರೆ.