ಸೆ 28 :ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿರುವಂತೆ, ಹದಿಹರೆಯದ ಹುಡುಗಿಯೊಬ್ಬಳನ್ನು ಎಂಟು ತಿಂಗಳ ಕಾಲ ಕೂಡಿ ಹಾಕಿ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ ಹಾಗೂ ಸೆಕ್ಸ್ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಸ್ವಘೋಷಿತ ದೇವ ಮಾನವ, ಬಾಬಾ ಸಿಯಾ ರಾಮ್ ದಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯಂತೆ ಬಾಬಾ ಮಾತ್ರವಲ್ಲದೆ, ಇತರ ಅನುಯಾಯಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾಳೆ. ಇದಲ್ಲದೆ ಬಾಬಾ ದಾಸ್ ರಾಜಕಾರಣಿಗಳಿಗೆ ಹುಡುಗಿಯರನ್ನು ಪೂರೈಸುವ ದಂದೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿಸಿದ್ದಾಳೆ. ಬಾಬಾ ಸಿಯಾರಾಮ್ ದಾಸ್ ಬಾಲಕಿಯ ಮೇಲೆ ಎಸಗಿದ ಅತ್ಯಾಚಾರದ ವಿಡಿಯೋ ಮಾಡಿ ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದಂತೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.