ಕುಂಬ್ಳೆ, ಜು 18: ಹೆತ್ತ ತಾಯಿಯೇ ಮಗುವನ್ನು ಬಾವಿಗೆಸೆದು ಕೊಲೆಗೈದ ಘಟನೆ ಕಾಸರಗೋಡಿನ ಎರಿಯಾಲ್ ನಲ್ಲಿ ಜು.18 ರ ಬುಧವಾರ ಸಂಜೆ ನಡೆದಿದೆ. ಮೃತ ಮಗುವನ್ನು ಶಮ್ನ ಎಂದು ಗುರುತಿಸಲಾಗಿದೆ.
ತಾಯಿ ನಸೀಮಾ ಹಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ತನ್ನ ಒಂದುವರೆ ವರ್ಷದ ಹೆಣ್ಣು ಮಗುವನ್ನು ಮನೆ ಸಮೀಪದಲ್ಲಿಯೇ ಇರುವ ಖಾಸಗಿ ವ್ಯಕ್ತಿಗೆ ಸೇರಿದ ಬಾವಿಗೆಸೆದಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಮಗುವನ್ನು ಮೇಲಕ್ಕೆತ್ತಿದರೂ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯಲ್ಲಿ ಮಗು ಅಸುನೀಗಿದೆ. ಸ್ಥಳಕ್ಕೆ ಕುಂಬ್ಳೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.