ಮಂಗಳೂರು, ಸೆ 28: ಅಕ್ರಮ ಮಸಾಜ್ ಪಾರ್ಲರ್ ವಿರುದ್ದ ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ. ಪಾಲಿಕೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಈ ವಿಷಯ ಪ್ರಸ್ತಾಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೇಯರ್ ಮತ್ತು ಆಯುಕ್ತರು ದಂಡ ಕಟ್ಟಬೇಕು ಎಂಬ ತೀರ್ಪನ್ನು ಹೈಕೋರ್ಟ್ ಕೈ ಬಿಟ್ಟಿರುವುದಾಗಿ ತಿಳಿಸಿದರು. ಅಕ್ರಮ ಮಸಾಜ್ ಪಾರ್ಲರ್ ದಾಳಿ ವಿಚಾರಕ್ಕೆ ಸಂಬಂಧಿಸಿ ಪಾರ್ಲರ್ ಮಾಲಕರು ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಸಂದರ್ಭ ಮೇಯರ್ ಹಾಗೂ ಪಾಲಿಕೆ ಆಯುಕ್ತರು ಗೈರು ಹಾಜರಾಗಿದ್ದರು ಎಂದು ದಂಡ ವಿಧಿಸಲಾಗಿತ್ತು. ಆದರೆ ಇದೀಗ ತೀರ್ಪಿನ ಪ್ರತಿ ಪಾಲಿಕೆ ಕೈ ಸೇರಿದ್ದು, ಅದರಲ್ಲಿ ದಂಡವನ್ನು ಕೈಬಿಡಲಾಗಿದ್ದು, ಅಕ್ರಮ ಪಾರ್ಲರ್ ವಿರುದ್ದ ಕಾನೂನು ಕ್ರಮ ಜರುಗಿಸಬಹುದೆಂದು ತಿಳಿಸಲಾಗಿದೆ ಎಂದರು.
ಹೀಗಾಗಿ ಮತ್ತೆ ಅಕ್ರಮ ಪಾರ್ಲರ್ ವಿರುದ್ದ ಮೇಯರ್ ದಾಳಿ ಬಹುನಿರೀಕ್ಷಿತವಾಗಿದೆ.