ಲೀಡ್ಸ್, ಜು 18: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಭಾರತ 2-1 ಅಂತರದಿಂದ ಸರಣಿ ಕೈಚೆಲ್ಲಿದೆ. ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 257 ರನ್ ಗಳನ್ನು ದಾಖಲಿಸಲಷ್ಟೇ ಶಕ್ತವಾಯಿತು.
ಟೀಂ ಇಂಡಿಯಾ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 44.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 260 ರನ್ ಪೇರಿಸಿ ವಿಜಯದ ನಗೆ ಚೆಲ್ಲಿತು. ಆ ಮೂಲಕ ೮ ವಿಕೆಟ್ ಗಳ ಭರ್ಜರಿ ಜಯ ಗಳಿಸಿತು. ಭಾರತದ ಪರ ನಾಯಕ ವಿರಾಟ್ ಕೊಹ್ಲಿ 71 (72), ಶಿಖರ್ ಧವನ್ 44 (49), ಎಂಎಸ್ ಧೋನಿ 42 (66) ರನ್ ಸಿಡಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳಿಂದ ನಿರೀಕ್ಷೆಯ ಮೊತ್ತ ದಾಖಲಾಗಿಲ್ಲ. ಇನ್ನು ಇಂಗ್ಲೇಡ್ ಪರ ಆರಂಭಿಕರಾಗಿ ಇಳಿದ ಜೇಮ್ಸ್ ವಿನ್ಸ್ (27/27), ಜಾನಿ ಬೇರ್ಸ್ಟೋವ್ (30/13) ರನ್ ಗಳನ್ನು ಪೇರಿಸಿದರು. ಬಳಿಕ ಕ್ರೀಡಾಂಗಣಕ್ಕೆ ಇಳಿದ ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಸದೆ ಬಡಿಯಲು ಭಾರತೀಯ ಬೌಲರ್ ಗಳು ವಿಫಲರಾದರು. ರೂಟ್ (100/120) ಮತ್ತು ಮಾರ್ಗನ್ (88/108) ಪಾರ್ಟ್ನರ್ ಶಿಪ್ ಭಾರತವನ್ನು ಸೋಲಿನಂಚಿಗೆ ತಳ್ಳಿತು.