ಉಡುಪಿ, ಜು 17 : ಅಂಗಡಿಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಕ್ಷಣ ಮಾತ್ರದಲ್ಲಿ ಮೊಬೈಲ್ ಎಗರಿಸಿದ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಶ್ರೀ ಪೂರ್ಣ ಎಲೆಕ್ಟ್ರಾನಿಕ್ ಶಾಪ್ ನಲ್ಲಿ ಸೋಮವಾರ ರಾತ್ರಿ ಅಪರಿಚಿತ ವ್ಯಕ್ತಿ ಪೋನ್ ನನ್ನು ಎಗರಿಸಿದ್ದಾನೆ.
ಅಂಗಡಿ ಮಾಲೀಕರ ಗಮನಕ್ಕೆ ಬಾರದಂತೆ ಈ ವ್ಯಕ್ತಿ 19 ಸಾವಿರ ಬೆಲೆ ಬಾಲುವ ಮೊಬೈಲನ್ನು ಎಗರಿಸಿದ್ದು, ಮೊಬೈಲ್ ಕಳೆದು ಹೋಗಿರುವುದು ತಡವಾಗಿ ಅಂಗಡಿ ಮಾಲೀಕರ ಗಮನಕ್ಕೆ ಬಂದಿದ್ದು ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಸಿಸಿಟಿವಿ ಫೂಟೇಜ್ ನಲ್ಲಿ ಖದೀಮನ ಕೃತ್ಯ ಸೆರೆಯಾಗಿದ್ದು, ಕೂಡಲೇ ಉಡುಪಿ ನಗರ ಠಾಣೆಯಲ್ಲಿ ಮೊಬೈಲ್ ಕಳವು ನಡೆದಿರುವ ಬಗ್ಗೆ ಅಂಗಡಿ ಮಾಲಕರು ದೂರು ನೀಡಿದ್ದಾರೆ. ಸಿ ಸಿ ಟಿ ವಿ ಪ್ಯೂಟೇಜ್ ಸಾಕ್ಷ್ಯಿಯ ಆಧಾರದಲ್ಲಿ ಪೋಲಿಸರು ಖದೀಮನ ಪತ್ತೆಗೆ ಬಲೆ ಬೀಸಿದ್ದಾರೆ.