ಸುಳ್ಯ , ಜು 17: ಮಾಣಿ - ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ಸಮೀಪದ ಪೆರಾಜೆ ಎಂಬಲ್ಲಿ ರಸ್ತೆಯ ಮೋರಿಯ ತಡೆಗೋಡೆ ಕುಸಿತಗೊಂಡು ಅಪಾಯಕಾರಿಯಾದ ಸ್ಥಿತಿ ನಿರ್ಮಾಣ ಆಗಿದೆ.
ರಸ್ತೆ ಅಭಿವೃದ್ದಿ ಮಾಡುವ ಸಂದರ್ಭದಲ್ಲಿ ಇಲ್ಲಿ ಮೋರಿಯೊಂದನ್ನು ನಿರ್ಮಾಣ ಮಾಡಲಾಗಿತ್ತು.ಅದಕ್ಕೆ ವಾಹನಗಳು ಡಿಕ್ಕಿ ಹೊಡೆದು ಮೋರಿಯ ಗೋಡೆ ಕುಸಿತಗೊಂಡು ಅದು ಉರುಳಿ ಬಿದ್ದಿದೆ. ಮೋರಿಯ ಗೋಡೆ ಉರುಳಿ ಬಿದ್ದ ಬಳಿಕ ಅದನ್ನು ಪನ್ರರಚಣೆ ಮಾಡವ ಕೆಲಸವನ್ನು ಸಂಬಂಧಪಟ್ಟವರು ಮಾಡಿಲ್ಲ.ಇಲ್ಲಿ ಕಂದಕ ನಿರ್ಮಾಣವಾಗಿ ಇನ್ನಷ್ಟು ಅಪಾಯಕಾರಿ ಸ್ಥಳವಾಗಿ ಮಾರ್ಪಟ್ಟಿದೆ.ಶಿರಾಡಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮಾಣಿ - ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು ಅನಾಹುತ ನಡೆಯುವ ಮೊದಲೆ ಕರ್ನಾಟಕ ರಸ್ತೆ ಅಭಿವೃದ್ದಿ ಪ್ರಾಧಿಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.