ಕಾಸರಗೋಡು, ಜು 17: ಆಟ ಆಡುತ್ತಿದ್ದಾಗ ಅಚಾನಕ್ ಆಗಿ ಸುಮಾರು 20 ಅಡಿ ಆಳದ ಕೆರೆಗೆ ಬಿದ್ದು, ನೀರಿನಲ್ಲಿ ಮುಳುಗುತ್ತಿದ್ದ ತನ್ನ ಗೆಳೆಯರನ್ನು ಯುಕೆಜಿ ವಿದ್ಯಾರ್ಥಿಯೊಬ್ಬ ರಕ್ಷಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾನೆ. ಸೈನುದ್ದೀನ್-ಅಸ್ಮ ದಂಪತಿ ಪುತ್ರ ಸೈನುಲ್ ಆಬಿದೀನ್ (5) ಮಕ್ಕಳನ್ನು ರಕ್ಷಿಸಿ ಎಲ್ಲರ ಕಣ್ಣಲ್ಲಿಯೂ ಹೀರೋ ಆದ ಪುಟಾಣಿ.
ಸ್ನೇಹಿತರ ಜತೆಯಲ್ಲಿ ಸೈನುಲ್ ಆಬಿದೀನ್ (ಕಪ್ಪು ಬಣ್ಣದ ಅಂಗಿ ಧರಿಸಿದವ)
ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಪಂನ ಮಲ್ಲಂ ಸಸಿಹಿತ್ಲುವಿನ ಮುನೀರ್-ಸಾಜಿದಾ ದಂಪತಿಯ ಪುತ್ರ ಬಾಸಿಂ ಸಮಾನ್(5), ಸಾಜಿದಾ ಅವರ ಸಹೋದರ ಆರಿಫ್ ನಿಸಾನ್ರ ಪುತ್ರ ಅಬ್ದುಲ್ ಶಾಮಿಲ್(5) ಅಚಾನಕ್ ಆಗಿ ಕೆರೆಗೆ ಬಿದ್ದ ಬಾಲಕರು.
ಶನಿವಾರದಂದು ಮಧ್ಯಾಹ್ನ ಈ ಮೂವರು ಮಕ್ಕಳು ಮನೆ ಸಮೀಪದಲ್ಲಿ ಚೆಂಡಾಟ ಆಟವಾಡುತ್ತಿದ್ದರು. ಈ ಸಂದರ್ಭ ಚೆಂಡು ಕೆರೆಗೆ ಬಿದ್ದಿದ್ದು, ಅದನ್ನು ತರಲೆಂದು ಹೋದ ಇಬ್ಬರು ಮಕ್ಕಳು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.
ಇಬ್ಬರೂ ಮುಳುಗೇಳುತ್ತಿದ್ದುದನ್ನು ಕಂಡ ಸ್ನೇಹಿತ ಸೈನುಲ್ ಆಬಿದೀನ್ ಭಯಪಡದೆ, ಮರದ ಕೋಲೊಂದನ್ನು ಕೆರೆಗೆ ಇಳಿಸಿ ಅದನ್ನು ಹಿಡಿದು ನಿಲ್ಲುವಂತೆ ತಿಳಿಸಿದ್ದಾನೆ . ಬಳಿಕ ಆ ಮರದ ತುಂಡನ್ನು ಹಿಡಿದು ನಿಧಾನವಾಗಿ ಮೇಲೆ ಬರಲು ತಿಳಿಸಿ ಕೈಹಿಡಿದು ಮೇಲಕ್ಕೆತ್ತಿರುವುದಾಗಿ ಬಾಲಕರು ತಮ್ಮ ಪೋಷಕರಿಗೆ ವಿವರಿಸಿದ್ದಾರೆ. ತನ್ನ ಸಮಯಪ್ರಜ್ಞೆಯಿಂದಾಗಿ ಸ್ನೇಹಿತರನ್ನು ರಕ್ಷಿಸಿದ ಆಬಿದಿನ್ ಎಲ್ಲರಿಂದಲೂ ಪ್ರಶಂಸೆಗೊಳಗಾಗಿದ್ದಾನೆ.
ಘಟನೆ ಬಳಿಕ ಮಾಹಿತಿ ಪಡೆದು ಆಗಮಿಸಿದ ಕಾಸರಗೋಡು ಡಿವೈಎಸ್ಪಿ ಎಂ.ವಿ. ಸುಕುಮಾರನ್ ,ಸೈನುಲ್ನನ್ನು ಆಬಿದೀನ್ ಅಭಿನಂದಿಸಿದ್ದಾರೆ,