ಕಡಬ, ಸೆ 28:ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು 108 ಆಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ಬೆಳಿಗ್ಗೆ ಸುಮಾರು 9.00 ಗಂಟೆಗೆ ಇಲ್ಲಿನ ಪದವು ಎಂಬಲ್ಲಿ ನಡೆದಿದೆ.
ತಾಯಿ ಮಗು ಆರೋಗ್ಯದಂದಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಎಂದರೆ ಇವರ ಮೊದಲ ಮಗುವಿನ ಹೆರಿಗೆಯೂ 108 ಅಂಬ್ಯುಲೆನ್ಸ್ ನಲ್ಲೇ ನಡೆದಿತ್ತು. ಕೋಡಿಂಬಾಳ ಗ್ರಾಮದ ದಂಡುಗುರಿ ನಿವಾಸಿ ರವೀಂದ್ರ ಎಂಬವರ ಪತ್ನಿ ಭವಾನಿ ಎಂಬವರು ಗುರುವಾರ ಮುಂಜಾನೆ ಹೆರಿಗೆ ನೋವು ಬಂದ ಕಾರಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿ ತಾಸು ಕಳೆದರೂ ವೈದ್ಯರು ಅಗಮಿಸದ ಕಾರಣ ದಾದಿಯರು ಕೊನೆಯ ಕ್ಷಣದಲ್ಲಿ ತುರ್ತಾಗಿ ಪುತ್ತೂರಿಗೆ ತೆರಳಲು ಸೂಚಿಸಿದರೆನ್ನಲಾಗಿದೆ.
ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ತೆರಳುತ್ತಿದ್ದಾಗ ಭವಾನಿಯವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ