ಮಂಗಳೂರು ಸೆ 28: ಮಂಗಳೂರಿನಿಂದ ದೋಹಾಗೆ ಸೆ ೨೧ ರಂದು, ಸಂಜೆ ೫.೩೦ಕ್ಕೆ ಸುಮಾರು ೧೭೦ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಐ.ಎಕ್ಸ್ ೮೨೧ ಉಡಾವಣೆಗೊಂಡ ಅರ್ಧ ಗಂಟೆಯಲ್ಲಿ ವಿಮಾನದ ಇಂಜಿನ್ ಸಮಸ್ಯೆಯಿಂದಾಗಿ ಪುನಃ ಮಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ನಾಗರೀಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ರವರಿಗೆ ಘಟನೆಯ ಸಂಪೂರ್ಣ ಮಾಹಿತಿ ನೀಡಿ ಘಟನೆಯ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ ೧೭೦ ಪ್ರಯಾಣಿಕರ ಜೀವ ರಕ್ಷಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮುಂಬೈ ಮೂಲದ ಪೈಲೆಟ್. ಆತಿಷ್ ಶಿಂಘೆ ಇವರ ಸಮಯಪ್ರಜ್ಞೆ ಮತ್ತು ವಿಮಾನದ ತುರ್ತು ಭೂಸ್ಪರ್ಷದ ಬಗ್ಗೆ ತೆಗೆದ ದಿಟ್ಟ ನಿರ್ಧಾರವನ್ನು ಶ್ಲಾಘಿಸಿದರು.
.ಈ ಬಗ್ಗೆ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ ಸಂಸದ ಕಟೀಲ್ ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯವು ಪೈಟ್ಗೆ ಗೌರವಿಸುವಂತೆಯೂ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.