ಉಡುಪಿ, ಜು 13: ಇಲ್ಲಿನ ಪಿಪಿಸಿ ರೋಡಿನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಸಾಲಮನ್ನಾ ಹಾಗೂ ಬಡ್ಡಿರಹಿತ ಸಾಲ ನೀಡುವಂತೆ ಒತ್ತಾಯಿಸಿ ಮೀನುಗಾರರು ಪ್ರತಿಭಟನೆ ನಡೆಸಿದರು.
ಸರಕಾರ ಬಜೆಟ್ ಘೋಷಣೆಯಲ್ಲಿ ಕರವಾಳಿಯನ್ನು ಹಾಗೂ ಕರವಾಳಿಯ ಮೀನುಗಾರರನ್ನು ಕಡೆಗಣಿಸಿದೆ. ರೈತರ ಸಾಲವನ್ನು ಮನ್ನಾ ಮಾಡಿದಂತೆ ಮೀನುಗಾರ ಮಹಿಳೆಯರ ಸಾಲವನ್ನು ಸರಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ ಸಬ್ಸಿಡಿಯಲ್ಲಿ ಮೀನುಗಾರರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಮೀನುಗಾರರು ಸರಕಾರವನ್ನು ಒತ್ತಾಯಿಸಿದರು.