ಮಂಗಳೂರು, ಜು13: ನಗರದ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಹಾಕಿಕೊಂಡಿದ್ದ ಗೂಡಂಗಡಿಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ನಗರ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ನಗರದ ವೆಲೆನ್ಸಿಯಾ, ಕಂಕನಾಡಿ, ನಂದಿಗುಡ್ಡೆ ಮೊದಲಾದ ಕಡೆಗಳಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.
ನಗರದ ಹಲವು ಕಡೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಹಾಗೂ ಗೂಡಂಗಡಿಗಳಿಂದಾಗಿ ಸಾರ್ವಜನಿಕರಿಗೆ ನಡೆದಾಡಲು ಮತ್ತು ವಾಹನ ಸಂಚಾರಕ್ಕೆ ಅಡೆಚನೆಯಾಗುತ್ತಿತ್ತು. ಜೊತೆಗೆ ಗೂಡಂಗಡಿಗಳಲ್ಲಿ ಸ್ವಚ್ಛತೆ ಕಾಪಾಡದ ಹಿನ್ನೆಲೆಯಲ್ಲಿ, ಸಂಚಾರದಲ್ಲಿ ವ್ಯತ್ಯಯ ಸೇರಿದಂತೆ ಹಲವು ಸಮಸ್ಯೆಗಳು ನಗರದಲ್ಲಿ ತಲೆದೋರುತ್ತಿತ್ತು. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾರ್ಯಾಚಣೆ ನಡೆಸಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದಾರೆ.
ಕಾರ್ಯಾಚರಣೆ ನಡೆದ ಸಂದರ್ಭ ಕೆಲ ಪರ ವಿರೋಧ ಚರ್ಚೆಗಳು ಜನರಿಂದ ವ್ಯಕ್ತವಾಗಿದೆ.