ಕಲ್ಲಡ್ಕ, ಜು 12: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಯುವತಿಯೊಬ್ಬಳು, ಜು.11ರ ಬುಧವಾರ ಸಂಜೆ ಕಲ್ಲಡ್ಕದಲ್ಲಿರುವ ತನ್ನ ಸಹೋದ್ಯೋಗಿ ಅನ್ಯ ಮತೀಯರೊಬ್ಬರ ಮನೆಗೆ ಬಂದಿರುವ ಘಟನೆ ನಡೆದಿದೆ. ಇದು ಸ್ಥಳೀಯವಾಗಿ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ಬಂದಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಯುವತಿಯನ್ನು ಅವರು ರಾತ್ರಿ ಹತ್ತು ಗಂಟೆಗೆ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಈ ಯುವತಿ ಮತ್ತು ಕಲ್ಲಡ್ಕದ ಅನ್ಯಮತೀಯ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಮಂಗಳೂರಿಗೆ ಬಂದಿದ್ದ ಆಕೆ ತನ್ನ ಸಹೋದ್ಯೋಗಿಯ ಕಲ್ಲಡ್ಕದ ಮನೆಗೆ ಭೇಟಿ ನೀಡಿದ್ದರು. ಇದು ಗೊಂದಲಕ್ಕೆ ಕಾರಣವಾಗಿದೆ.