ಸುಬ್ರಹ್ಮಣ್ಯ, ಜು 11: ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕುಮಾಧಾರ ಸ್ನಾನ ಘಟ್ಟದಲ್ಲಿ ಇನ್ನೂ ಕೂಡ ನೀರು ಕಡಿಮೆಯಾಗದ ಹಿನ್ನೆಲೆ ಭಕ್ತರಿಗೆ ಅಡಚನೆಯಾಗುತ್ತಿದೆ.
ಕುಮಾಧಾರ ನದಿಯಲ್ಲಿ ಒಳಹರಿವು ಹೆಚ್ಚಿದ್ದು, ಸ್ನಾನಘಟ್ಟ ಜಲಾವೃತಗೊಂಡಿದೆ. ಅಲ್ಲದೆ ಪರಿಸರದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿರುವ ವಿಶ್ರಾಂತಿ ಕೊಠಡಿಗಳಿಗೆ ನೀರು ನುಗ್ಗಿದೆ. ಕಳೆದ 1 ವಾರದಿಂದ ಸ್ನಾನಘಟ್ಟ ಜಲಾವೃತಗೊಂಡಿದ್ದು, ಇದುವರೆಗೂ ನದಿಯಲ್ಲಿನ ಪ್ರವಾಹ ಇಳಿಮುಖಗೊಂಡಿಲ್ಲ.