ಜು, 11: ಸುಳ್ಳು ಸುದ್ದಿ ವದಂತಿಗಳು ನಂಬಿ ಆಗುತ್ತಿರುವಂತಹ ಅನಾಹುತಗಳನ್ನು ತಡೆಗಟ್ಟಲು, ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಷನ್ ವಾಟ್ಸಪ್ ನಲ್ಲಿ ಹೊಸ ಫೀಚರ್ ನ್ನು ನೀಡಿದೆ. ಈ ಫೀಚರ್ ನಿಂದ ಫಾರ್ವರ್ಡ್ ಮೆಸೇಜನ್ನು ಮುಂದೆ ಸುಲಭವಾಗಿ ತಿಳಿಯಬಹುದಾಗಿದೆ.
ವಾಟ್ಸಪ್ ತನ್ನ ನೂತನ ಫೀಚರ್ ನಲ್ಲಿ ಮೆಸೇಜ್ ಮೇಲ್ಭಾಗದಲ್ಲೇ ಆ ಮೆಸೇಜ್ ಫಾರ್ವರ್ಡ್ ಎಂದು ಬರೆದಿರುತ್ತದೆ. ಈ ಮೂಲಕ ಮೆಸೇಜನ್ನು ಸ್ವತಃ ಕ್ರಿಯೇಟ್ ಮಾಡಿ ಕಳುಹಿದ್ದಾರೋ ಅಥವಾ ಬೇರೆಯವರು ಸೆಂಡ್ ಮಾಡಿದ್ದ ಮೆಸೇಜನ್ನು ಫಾರ್ವರ್ಡ್ ಮಾಡಿದ್ದರೋ ಎನ್ನುವದನ್ನು ಪತ್ತೆ ಮಾಡಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಫೇಸ್ ಬುಕ್ ಮತ್ತು ವಾಟ್ಸಪ್ ಖಾತೆಗಳ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಹಿನ್ನಲೆಯಲ್ಲಿ ವ್ಯಾಟ್ಸಾಪ್ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಒಂದು ತಿಂಗಳ ಹಿಂದೆ ಬೀಟಾ ಆವೃತ್ತಿಯನ್ನು ಬಳಸುತ್ತಿದ್ದ ಬಳಕೆದಾರರಿಗೆ ಈ ವಿಶೇಷತೆಯನ್ನು ನೀಡಿದ್ದ ವಾಟ್ಸಪ್ ಈಗ ತನ್ನ ಎಲ್ಲ ಬಳಕೆದಾರರಿಗೆ ವಿಸ್ತರಿಸಿದೆ. ಹೊಸ ವಿಶೇಷತೆ ಬೇಕಿದ್ದರೆ ಗ್ರಾಹಕರು ವಾಟ್ಸಪ್ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ.