ಮಂಗಳೂರು, ಫೆ.07 (DaijiworldNews/PY): ಇನ್ಲ್ಯಾಂಡ್ ಬಿಲ್ಡರ್ಸ್ನ ಅತ್ಯಂತ ಜನಪ್ರಿಯ ಇನ್ಲ್ಯಾಂಡ್ ಪ್ರಾಪರ್ಟಿ ಮೇಳದ 3ನೇ ಆವೃತ್ತಿಯು ನಗರದಲ್ಲಿ ಫೆಬ್ರವರಿ.8 ಸೋಮವಾರದಂದು ಶುಭಾರಂಭಗೊಳ್ಳಲಿದೆ.
2018-2019ರ ಆವೃತ್ತಿಗಳು ಈ ಕೆಳಗಿನ ವಿಶಿಷ್ಟ ಸ್ವರೂಪದಿಂದಾಗಿ ಗ್ರಾಹಕರಿಂದ ಭಾರಿ ಬೇಡಿಕೆ/ ಪ್ರತಿಕ್ರಿಯೆಯನ್ನು ಪಡೆದಿದೆ. ವಿಶ್ವಾಸಾರ್ಹ ಹಾಗೂ ಗಣನೀಯವಾದ ರಿಯಾಯಿತಿ, ಗ್ರಾಹಕರಿಗೆ ಪ್ರಾಜೆಕ್ಟ್ ಸಂಬಂದಿತ ವಿನ್ಯಾಸಗಳು, ವಿಡಿಯೋಗಳು ಹಾಗೂ ಯೋಜನೆಯ ಪೂರ್ಣ ಮಾಹಿತಿಗಳನ್ನು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಕಂಪನಿಯ ಆವರಣದಲ್ಲಿ ಅನುಕೂಲಕರವಾಗಿ ಮೇಳವನ್ನು ಆಯೋಜಿಸಲಾಗಿತ್ತು. 20 ದಿನಗಳ ತನಕ ನಡೆದ ಈ ಮೇಳವು ಗ್ರಾಹಕರಿಗೆ ತಮ್ಮ ಆಯ್ಕೆಯ ಅಪಾರ್ಟ್ಮೆಂಟ್ಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿ ಆಯ್ದುಕೊಳ್ಳಲು ಅನುವು ಮಾಡಿಕೊಟ್ಟಿತು.
ಈ ಬಾರಿಯೂ ಇನ್ಲ್ಯಾಂಡ್ ಅದೇ ರೀತಿಯ ಗೆಲುವಿನ ಸ್ವರೂಪವನ್ನು ಉಳಿಸಿಕೊಳ್ಳಲು, ತನ್ನ ಗ್ರಾಹಕರಿಗಾಗಿ ವಿಶೇಷವಾದ ರಿಯಾಯಿತಿಯ ರೂಪುರೇಷೆಯನ್ನು ಯೋಜಿಸಿದೆ.
ಮೇಳದ ಈ ಆವೃತ್ತಿಯನ್ನು ಫೆಬ್ರವರಿ 8ರಂದು ಕಂಪನಿಯ ಆವರಣದಲ್ಲಿ ಜೊ ಗೊನ್ಸಾಲ್ವೆಸ್ ಮತ್ತು ದೈಜಿವಲ್ಡ್ ವ್ಯವಸ್ಥಾಪಕ ವಾಲ್ಟರ್ ನಂದಳಿಕೆ ಅವರು ಉದ್ಘಾಟಿಸಲಿದ್ದಾರೆ.
ಮದ್ಯಮ ವರ್ಗದ ನಾಗರಿಕರಿಗೆ, ಗ್ರಾಹಕರಿಗೆ, ಬಂಡವಾಳದಾರರಿಗೆ ಸ್ಥಿರವಾದ ಆದಾಯ ಮತ್ತು ಆರ್ಥಿಕ ಭದ್ರತೆಗಾಗಿ ರಿಯಲ್ ಎಸ್ಟೇಟ್ ಹೂಡಿಕೆಯು ಅತ್ಯಂತ ಸುರಕ್ಷಿತ ಎಂಬ ಅರಿವು ಮೂಡಿಸುವುದು ಪ್ರತಿಯೊಬ್ಬ ಬಿಲ್ಡರ್ನ ಕರ್ತವ್ಯವಾಗಿದೆ. ಪ್ರಚಲಿತ ವಿದ್ಯಮಾನದಲ್ಲಿ ಚಾಲ್ತಿಯಲ್ಲಿರುವ ಅನೇಕ ಹೂಡಿಕೆಗಳಲ್ಲಿ ರಿಯಲ್ ಎಸ್ಟೇಟ್ ಸೂಕ್ತವಾದ ಹಾಗೂ ವಿಶ್ವಾಸಾರ್ಹ ಹೂಡಿಕೆ ಎಂದು ಹಲವಾರು ತಜ್ಞರುಗಳ ಸ್ಪಷ್ಟ ಅಭಿಪ್ರಾಯವಾಗಿದೆ. ಜಗತ್ತು ಕಂಡ ಕೊರೊನಾ ಸಾಂಕ್ರಮಿಕದಿಂದಾಗಿ ಸ್ಥಿರಾಸ್ತಿಗಳ ಬೆಲೆ ಮಧ್ಯಮವಾದದ್ದು ಮಾತ್ರವಲ್ಲದೆ, ಸರಕಾರವು ಕೂಡ ಮನೆ ಖರೀದಿದಾರರ ತೊಂದರೆಗಳನ್ನು ಗುರುತಿಸಿ ಪ್ರಧಾನ್ ಮಂತ್ರಿ ಆವಾಜ್ ಯೋಜನೆಯ ವಿಸ್ತರಣೆ, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಮುಂತಾದ ಹಲವಾರು ಯೋಜನೆಗಳನ್ನು ಸರಕಾರ ಯೋಜಿಸಿದೆ. ಈ ಸಂದರ್ಭದಲ್ಲಿ ಅನೇಕ ಜನರು ತಮ್ಮ ಅಮೂಲ್ಯವಾದ ಉಳಿತಾಯವನ್ನು ಸುರಕ್ಷಿತ ಮಾತ್ರವಲ್ಲದೆ ಲಾಭದಾಯಕವಾಗಿ ಪರಿರ್ವತಿಸುವುದು ಅತೀ ಅಗತ್ಯ ಎಂದು ಮನವರಿಕೆ ಮಾಡಿಕೊಂಡಿದ್ದಾರೆ. ಅಂತಹ ಹೂಡಿಕೆದಾರರಿಗೆ ಮತ್ತು ಮೊದಲ ಬಾರಿ ಮನೆ ಖರೀದಿದಾರರಿಗೆ ಈ ಮೇಳವು ಒಂದು ಉತ್ತಮ ಅವಕಾಶ. ಆಸ್ತಿ ಹೂಡಿಕೆಗಳು ದೀರ್ಘಾವದಿಯಲ್ಲಿ ಸ್ಥಿರವಾಗಿ ಬೆಳೆಯುತ್ತದಲ್ಲದೆ ಮಾಸಿಕ ಬಾಡಿಗೆಗಳನ್ನು ಸಹ ನೀಡುತ್ತದೆ.
"ಈ ಮೇಳದಲ್ಲಿ ನಾವು ಎಲ್ಲಾ ವರ್ಗದ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷವಾದ ರಿಯಾಯಿತಿಯನ್ನು ನೀಡುತ್ತಿದ್ದೇವೆ" ಎಂದು ಸಂಸ್ಥೆಯ ವ್ಯವಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹಮ್ಮದ್ ಅವರು ತಿಳಿಸಿದ್ದಾರೆ. ನಮ್ಮಲ್ಲಿ 35 ಲಕ್ಷ ವ್ಯಾಪ್ತಿಯ ಬಜೆಟೆಡ್ ಫ್ಲಾಟ್ಗಳು ಮತ್ತು ಉನ್ನತ ಬೆಲೆ ವ್ಯಾಪ್ತಿಯಲ್ಲಿ ಉತ್ತಮ ಗುಣಮಟ್ಟದ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಪ್ರೀಮಿಯಂ ಫ್ಲಾಟ್ಗಳಿವೆ. ಇನ್ಲ್ಯಾಂಡ್ ಮಂಗಳೂರಿನ ಬೆಂದೂರ್, ಬಿಜೈ, ಕುಳೂರು ಕಾವೂರು ರಸ್ತೆ, ಉಳ್ಳಾಲ, ಪುತ್ತೂರು ಮತ್ತು ಬೆಂಗಳೂರುನಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಛಯಗಳನ್ನು ಹೊಂದಿವೆ. ಇತ್ತೀಚಿಗೆ ಶಿಲಾನ್ಯಾಸಗೊಂಡ ಇನ್ಲ್ಯಾಂಡ್ನ ಅಲ್ಟ್ರಾ ಮಾಡರ್ನ್ ವಾಣಿಜ್ಯ ಸಂಕೀರ್ಣ “ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್” ಬಿಜೈ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತಿದ್ದು, ಕೆ.ಎಸ್.ಆರ್.ಟಿ.ಸಿ. ಮತ್ತು ಭಾರತ್ ಮಾಲ್ಗೆ ಅತ್ಯಂತ ಸಮೀಪದಲ್ಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡುತ್ತಿರುವ ಐಟಿ ಕಂಪನಿ, ಆಭರಣ, ಜವಳಿ, ಫಾರ್ಮಸಿ, ಡಯೋಗ್ನಸ್ಟಿಕ್ ಕೇಂದ್ರ ಹಾಗೂ ಕ್ಲಿನಿಕ್ಗಳು ಆಧುನಿಕ ಹಾಗೂ ಉತ್ತಮ ಗುಣಮಟ್ಟದ ಕಚೇರಿಯನ್ನು ಹುಡುಕುತ್ತಿದ್ದು ಇಂತಹ ಹೂಡಿಕೆದಾರರಿಗೆ ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ವಾಣಿಜ್ಯ ಮಳಿಗೆಯು ಸೂಕ್ತ ಸ್ಥಳವಾಗಿದೆ ಅಲ್ಲದೆ ಖರೀದಿದಾರರಿಗೆ ತನ್ನ ಹಣಕಾಸಿನ ಹೂಡಿಕೆಯನ್ನು ಕ್ರಮಬದ್ಧವಾಗಿ ಕಂತಿನರೂಪದಲ್ಲಿ ಪಾವತಿಸಲು ಅವಕಾಶವಿದೆ.
"ಗ್ರಾಹಕರು ಇನ್ಲ್ಯಾಂಡ್ಬ್ರಾಂಡ್ನ ಮನೆ ಖರೀದಿಸಲು ಕಟ್ಟಡ ನಿರ್ಮಾಣದ ಅತ್ಯುತ್ತಮ ಗುಣಮಟ್ಟವೇ ಪ್ರಥಮ ಕಾರಣವಾಗಿದೆ, ಅಲ್ಲದೇ ನಮ್ಮ ಹಾಲಿ ಗ್ರಾಹಕರು ವಾಣಿಜ್ಯ ಮಳಿಗೆ ಮತ್ತು ಮನೆಗಳಿಗೆ ಮರು ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತಿದೆ" ಎಂದು ಕಂಪನಿಯ ನಿರ್ದೇಶಕ ಮೆರಾಜ್ ಯೂಸಫ್ ಸಿರಾಜ್ ಅವರು ತಿಳಿಸಿದ್ದಾರೆ. ಇನ್ಲ್ಯಾಂಡ್ ಸಂಸ್ಥೆಯು ಇನ್ಲ್ಯಾಂಡ್ ಇನ್ಡೋರ್ಸ್ ಇಂಟೀರಿಯರ್ಸ್ ಸ್ಟುಡಿಯೋವನ್ನು ಹೊಂದಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಸುಂದರವಾದ ಒಳಾಂಗಣ ವಿನ್ಯಾಸವನ್ನು ಒಂದೇ ಸೂರಿನಡಿಯಲ್ಲಿ ಹೊಂದಬಹುದಾಗಿದೆ.
ಇನ್ಲ್ಯಾಂಡ್ನ 20 ದಿನಗಳ ಈ ಮೇಳದಲ್ಲಿ ಮನೆ ಖರೀದಿಸಲು ಬಯಸುವವರು ಹಾಗೂ ಹೂಡಿಕೆದಾರರಿಗೆ ನಮ್ಮ ವಸತಿ ಸಮುಚ್ಛಯಗಳ ಬಗ್ಗೆ, ಹೂಡಿಕೆಯ ಮೇಲೆ ಸೂಕ್ತ ಪ್ರತಿಫಲವನ್ನು ನೀಡುವ ಯೋಜನೆಗಳ ಬಗ್ಗೆ, ಬಾಡಿಗೆ ಮನೆಗಳ ಮೂಲಕ ಆದಾಯಗಳಿಕೆ ಹಾಗೂ ವಿದೇಶದಲ್ಲಿ ವಾಸಿಸುವ ಜನರಿಗೆ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ಯಾವ ರೀತಿ ಆದಾಯವನ್ನು ಪಡೆಯಬಹುದು ಮುಂತಾದವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ.
ಇನ್ಲ್ಯಾಂಡ್ ಪ್ರಾಪರ್ಟಿ ಮೇಳದ ಬೃಹತ್ ರಿಯಾಯಿತಿಯನ್ನು ತಮ್ಮದಾಗಿಸಲು ಈ ಸುರ್ವಣಾವಕಾಶವನ್ನು ಸದುಪಯೋಗಪಡಿಸಬೇಕೆಂದು ಗ್ರಾಹಕರನ್ನು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: www.inlandbuilders.net
ಸ್ಥಳ: 3ನೇ ಮಹಡಿ, ಇನ್ಲ್ಯಾಂಡ್ ಆರ್ನೆಟ್, ನವ ಭಾರತ್ ಸರ್ಕಲ್
ದಿನಾಂಕ: ಫೆಬ್ರವರಿ 8 ರಿಂದ ಫೆಬ್ರವರಿ 28, 2021
ವೇಳೆ: 9.30 ರಿಂದ 7.30
ಸಂಪರ್ಕಿಸಿ: 9972089099, 9972014055