ನವದೆಹಲಿ, ಜು 11: ಸಂಸತ್ ನಲ್ಲಿ ಜು.18 ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ , ರಾಜ್ಯ ಸಭಾ ಸದಸ್ಯರು, ಕೊಂಕಣಿ , ಕನ್ನಡ ಸೇರಿ 22 ಭಾಷೆಗಳಲ್ಲಿ ಮಾತನಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.ಈ ಹಿಂದೆ ಕನ್ನಡ ಗುಜರಾತಿ ಹಿಂದಿ ಸೇರಿದಂತೆ 17 ಭಾಷೆಗಳನ್ನು ಮಾತನಾಡಲು ಅವಕಾಶವಿತ್ತು. ಈ ಬಾರಿ ಕೊಂಕಣಿ, ಡೋಗ್ರಿ ಕಾಶ್ಮೀರ ಸಥಾಲಿ ಮತ್ತು ಸಿಂಧಿ ಭಾಷೆಗಳನ್ನು ಸೇರಿಸಲಾಗಿದೆ. ಏಕಕಾಲದಲ್ಲೆ ಈ ಭಾಷೆಗಳ ಅರ್ಥ ವಿವರಣೆ ನೀಡುವಂಥ ಸಮಿತಿಯನ್ನು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ನೇಮಕ ಮಾಡಿಕೊಂಡಿದ್ದಾರೆ.
ಇನ್ನೊಂದೆಡೆ ಸದಸ್ಯರ ಗದ್ದಲದಿಂದಾಗಿ ಸಂಸತ್ ಕಲಾಪಗಳು ವ್ಯರ್ಥವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಎಲ್ಲ ಸಂಸದರಿಗೂ ಪತ್ರವೊಂದನ್ನು ಬರೆದಿದ್ದಾರೆ. ಹಿಂದೆ ಇತರೆ ಪಕ್ಷಗಳು ಗದ್ದಲ ಉಂಟುಮಾಡಿದ್ದವು ಎಂಬುದನ್ನೇ ನೆಪವಾಗಿಟ್ಟುಕೊಂಡು ಎಲ್ಲರೂ ಗದ್ದಲ ಮುಂದುವರಿಸುತ್ತಾ ಹೋದರೆ ಸಮಸ್ಯೆ ಉಲ್ಬಣವಾಗುವುದಿಲ್ಲ. ಅತ್ಮವಿಮರ್ಶೆ ಮಾಡಿಕೊಂಡು ಪ್ರಜಾಪ್ರಭುತ್ವ ಪವಿತ್ರ ದೇಗುಲವಾದ ಸಂಸತ್ ಪ್ರತಿಷ್ಟೆ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.