ಮಂಗಳೂರು, ಜು 11: ಮಾಜಿ ಸಚಿವ, ಸಜ್ಜನ ರಾಜಕಾರಣಿ, ಬಿ.ಎ ಮೊಹಿದೀನ್ ಅವರು ಜು.11 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಅವರ ಆತ್ಮಕಥನವಾದ "ನನ್ನೊಳಗಿನ ನಾನು " ಕೃತಿ ಬಿಡುಗಡೆಯಾಗಬೇಕಿತ್ತು. ಇದಕ್ಕಾಗಿ ಜು 20 ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮವೂ ನಿಗದಿಯಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು...
ಬಿ.ಎ ಮೊಹಿದೀನ್ ಅವರ ಆತ್ಮಕಥೆಯಲ್ಲಿ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜಕೀಯ ಕ್ಷೇತ್ರದಲ್ಲಿನ ಚದುರಂಗದಾಟವನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದರು...
ಬದುಕಿನ ಎಲ್ಲಾ ಆಟಗಳು ಮುಗಿಯುತ್ತಾ ಬಂತು . ಉಳಿದಿರುವುದು ಎಷ್ಟು ದಿನವೂ , ನನ್ನ ಬದುಕಿನ ರಂಗಪರದೆ ಎಳೆಯಲು ಪರದೆ ಎಳೆಯುವವ ಕಾಯುತ್ತಿದ್ದಾನೆ ಯಾವುದೇ ಕ್ಷಣದಲ್ಲಿ ಯಾವ ಸುಳಿಯು ಇಲ್ಲದಂತೆ ಆತ ಎಳೆದು ಬಿಡಬಹುದು .ಆದಕ್ಕಾಗಿ ನಾನು ತಯಾರಾಗುತ್ತಿದ್ದೇನೆ . ಈ ಜಗತ್ತಿನಲ್ಲಿ ಒಂದು ಸುಂದರ ಬದುಕನ್ನು ಬದುಕಿದ ತೃಪ್ತಿ ನನಗಿದೆ.. ಇದು ಸಾವಿನ ಬಗ್ಗೆ ಪುಸ್ತಕದಲ್ಲಿ ಅವರು ಹೇಳಿರುವ ಮಾರ್ಮಿಕ ಮಾತು.. ದುರಂತವೆಂದರೆ ಪುಸ್ತಕ ಬಿಡುಗಡೆಗೆ ಇನ್ನು 9 ದಿನ ಬಾಕಿ ಇರುವಂತೆಯೇ ಮೊಹಿದೀನ್ ನಿಧನರಾಗಿದ್ದಾರೆ.