ಕಾಸರಗೋಡು, ಜು 10: ಉಪ್ಪಳ ನಯಾಬಜಾರ್ ನಲ್ಲಿ ಜುಲೈ 9ರ ಸೋಮವಾರ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಒಂದು ವರ್ಷದ ಮಗು ಮಂಗಳವಾರ ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಇದರಿಂದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಅಪಘಾತದ ಸಂದರ್ಭ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದಲ್ಲಿ ಮೃತಪಟ್ಟ ನಸೀಮಾರ ಪುತ್ರಿ ಫಾತಿಮಾ ಮೃತಪಟ್ಟ ಮಗು.
ಅಪಘಾತ ನಡೆದ ಸಂದರ್ಭ ತಲಪಾಡಿ ಕೆ . ಸಿ ರೋಡ್ ಅಜ್ಜಿನಡ್ಕದ ಬೀಫಾತಿಮ್ಮ ( 69), ಪುತ್ರಿ ನಸೀಮಾ ( 38), ಮುಸ್ತಾಕ್ ( 41), ಇಮ್ತಿಯಾಜ್ ( 40) , ಆಸ್ಮಾ ( 30) ಸ್ಥಳದಲ್ಲೇ ಮೃತಪಟ್ಟಿದ್ದರು. 11 ಮಂದಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಅಪಘಾತ ನಡೆದಿತ್ತು. ಪಾಲಕ್ಕಾಡ್ ನಲ್ಲಿ ಗೃಹ ಪ್ರವೇಶದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ನಯಾಬಜಾರ್ ನಲ್ಲಿ ಇವರು ಸಂಚರಿಸುತ್ತಿದ್ದ ತೂಫಾನ್ ಜೀಪು ಮತ್ತು ಲಾರಿ ನಡುವೆ ಅಪಘಾತ ನಡೆದು ಈ ಅವಘಡ ಸಂಭವಿಸಿತ್ತು.