ಬೆಂಗಳೂರು , ಜು 10: ಜೆಡಿಎಸ್ ನ ಎಂಎಲ್ ಸಿ ಬಿಎಂ ಫಾರೂಖ್ ಅವರು ಸರ್ಕಾರ ನೀಡುವ ಪ್ರತಿ ತಿಂಗಳ ವೇತನ ಮತ್ತು ಭತ್ಯೆಯನ್ನು ಅನಾಥ ಮಕ್ಕಳಿಗೆ ಹಾಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ದಾನ ಮಾಡುವುದಾಗಿ ಹೇಳಿದ್ದಾರೆ.
ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಮಂಗಳೂರು ಮೂಲದ ಉದ್ಯಮಿ ಫಾರುಖ್ ವೇತನ ಮತ್ತು ಭತ್ಯಯನ್ನು ಸ್ವಂತಕ್ಕೆ ಬಳಸದೆ ಅನಾಥರಿಗೆ ಮತ್ತು ಬಡ ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ಇವರಿಗೆ 1 ಲಕ್ಷ ರುಪಾಯಿ ವೇತನ ಹಾಗೂ ಸಭೆ, ಪ್ರವಾಸ ಮತ್ತು ಇತರೆ ಭತ್ಯೆಗಳಿಗೆ ಸುಮಾರು 1 ಲಕ್ಷ ರುಪಾಯಿ ಬರುತ್ತಿದ್ದು, ಈ ಹಣವನ್ನು ಅವರು ಅಗತ್ಯವಿರುವ ಕ್ಯಾನ್ಸರ್ ರೋಗಿಗಳ ಸೇವೆಗೆ ಮತ್ತು ಅನಾಥ ಮಕ್ಕಳಿಗೆ ಸಹಾಯ ರೂಪದಲ್ಲಿ ನೀಡುವುದಾಗಿ ಹೇಳಿದ್ದಾರೆ . ಇದಲ್ಲದೆ ಎಂಎಲ್ ಸಿ ಬಿಎಂ ಫಾರೂಖ್ ಅವರು, ಅವರ ತಾಯಿ ಆಯೆಶಾ ಹೆಸರಿನಲ್ಲಿ ಅನಾಥ ಆಶ್ರಮವನ್ನು ನಡೆಸುತ್ತಿದ್ದಾರೆ. ಬಿ ಎಂ ಫಾರೂಖ್ ಅವರ ಈ ನಡೆ ಇತರ ರಾಜಕಾರಣಿಗಳಿಗೆ ಮಾದರಿಯಾಗಿದೆ.