ಜು,09: ಐತಿಹಾಸಿಕ ತಾಜ್ಮಹಲ್ನಲ್ಲಿ ನಮಾಜ್ಗೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಭಾರತದ ಹೆಮ್ಮೆಯ ಐತಿಹಾಸಿಕ ತಾಜಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ, ನಮಾಜ್ಗಾಗಿಯೇ ಇತರೆ ಸ್ಥಳಗಳು ಇವೆ. ಹಾಗಾಗಿ ಇಲ್ಲಿ ನಮಾಜ್ ಮಾಡಬೇಕೆನ್ನುವ ಯೋಚನೆಯನ್ನೇ ಬಿಟ್ಟುಬಿಡುವಂತೆ ಕೋರ್ಟ್ ತಿಳಿಸಿದೆ.
ತಾಜ್ ಮಹಲ್ ನಲ್ಲಿ ಹೊರಗಿನವರು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಆಗ್ರಾ ಆಡಳಿತ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಸಲಾಗಿತ್ತು.
ಈ ಹಿಂದೆ ತಾಜ್ಮಹಲ್ನ ರಕ್ಷಣೆ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ತಾಜ್ ಮಹಲ್ ಸಂರಕ್ಷಣೆ, ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ಭಾರತೀಯ ಪುರಾತತ್ತ್ವ ಇಲಾಖೆಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಉಲ್ಲೇಖನೀಯ