ಕಾರ್ಕಳ, ಫೆ.02 (DaijiworldNews/MB) : ಆನೆಕೆರೆ ಕಾಲುವೆಯಲ್ಲಿ ಕಾರೊಂದು ಉರುಳಿ ಬಿದ್ದಿದೆ.
ಕೇರಳ ನೊಂದಾವಣೆಯ ಕಾರು ಅದಾಗಿದ್ದು ರವಿವಾರದಂದು ಹೊಟೇಲ್ವೊಂದರ ಮುಂಭಾಗದಲ್ಲಿ ಇದ್ದ ಆ ಕಾರು ತಡರಾತ್ರಿ ಅಲ್ಲಿಂದ ಹೊರಟ್ಟಿತು. ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ.
ಕೇರಳದ ವಿದ್ಯಾರ್ಥಿಯೊಬ್ಬನ ಸಾರಥ್ಯದಲ್ಲಿ ಆ ಹೋಟೆಲ್ನಲ್ಲಿ ಪಾರ್ಟಿ ನಡೆದಿತ್ತೆನ್ನಲಾಗಿದ್ದು, ಇದುವೇ ಚಾಲಕನ ನಿಯಂತ್ರಣ ತಪ್ಪಲು ಕಾರಣವೆನ್ನಲಾಗಿದೆ.
ಉರುಳಿ ಬಿದ್ದ ಕಾರಿನಲ್ಲಿ ಇದ್ದ ಪ್ರಯಾಣಿಕರು ಎದ್ದು ಮರಳಿ ಹೊಟೇಲ್ನ ರೂಂಗೆ ತೆರಳಿದ್ದರು. ಸೋಮವಾರ ಮಧ್ಯಾಹ್ನ ಕ್ರೇನ್ ಮೂಲಕ ಮೇಲಕ್ಕೇತ್ತಲಾಗಿದೆ.