ಉಡುಪಿ, ಜು 09: ಭೂಗತ ಪಾತಕಿ ಬನ್ನಂಜೆ ರಾಜ ಯಾನೆ ರಾಜೇಂದ್ರ ಕುಮಾರ್ ತಾಯಿ ಆನಾರೋಗ್ಯದಿಂದ ಬಳಲುತ್ತಿದ್ದು ಹೀಗಾಗಿ ತಾಯಿಯನ್ನು ನೋಡಲೆಂದು ಉಡುಪಿಗೆ ಆಗಮಿಸಿದ್ದಾನೆ. ವಿಚಾರಣಾಧೀನ ಖೈದಿಯಾಗಿ ಬೆಳಗಾವಿಯ ಹಿಂಡೆಲಾಗ ಜೈಲಿನಲ್ಲಿನಲ್ಲಿದ್ದ. ಈತನನ್ನು ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಸೋಮವಾರ ಉಡುಪಿಯ ಮಲ್ಪೆ ಸಮೀಪವಿರುವ ಕಲ್ಮಾಡಿಯಲ್ಲಿರುವ ತಾಯಿಯನ್ನು ಕಾಣಲು ಅವಕಾಶ ಮಾಡಿಕೊಡಲಾಗುವುದು. ಉತ್ತರ ಆಫ್ರಿಕಾದ ಮೊರೆಕ್ಕೋದಲ್ಲಿ ಬಂಧಿತನಾಗಿದ್ದ ಬನ್ನಂಜೆ ರಾಜನ ಮೇಳೆ 40 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಈತ ಮೂಲತಃ ಮಲ್ಪೆ ಬಾಪುತೋಟದ ನಿವಾಸಿ.
ಮಾನವೀಯ ನೆಲೆಯಲ್ಲಿ ಭೇಟಿಗೆ ಅವಕಾಶ ಮಾಡಿಕೊಟ್ಟ ನ್ಯಾಯಾಲಯ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು, ಸಾರಿಗೆ ಭದ್ರತಾ ವೆಚ್ಚವಾಗಿ ಮುಂಗಡವಾಗಿ ಪೊಲೀಸ್ ಇಲಖೆಗೆ ಪಾವತಿಸುವಂತೆ ಬನ್ನಂಜೆ ರಾಜನಿಗೆ ಸೂಚಿಸಿತ್ತು . ಅದರಂತೆ ಆತ 1.88 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಸೋಮವಾರ ಬೆಳಗ್ಗೆ 6 ರಿಂದ ಸಾಯಂಕಾಲ 6 ರವರೆಗೆ ತಾಯಿ ವಾಸಿಸುತ್ತಿರುವ ಕಲ್ಮಾಡಿ ಮನೆಯಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೂ ಮೊದಲು ಕಲ್ಮಾಡಿ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದು ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.