ಮಂಗಳೂರು ಜು 08 :ಭದ್ರತೆಗೆ ನಿಯೋಜಿತರಾದ ಗನ್ಮ್ಯಾನ್ ಒಬ್ಬರು ವಿಐಪಿ ಜತೆ ಫೋಟೊಗೆ ಫೋಸ್ ಕೊಟ್ಟು ಕೆಲಸ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ್ ಜೊತೆ ಫೋಟೋಗೆ ಪೋಸ್ ಕೊಟ್ಟ ಗನ್ ಮ್ಯಾನ್ ಮಲ್ಲಿಕಾರ್ಜುನ ಅಮಾನತುಗೊಂಡವರು.
ವಿಐಪಿ ಜತೆ ಫೋಟೋ ತೆಗೆಸಿಕೊಂಡು ನಿಯಮ ಉಲ್ಲಂಘನೆ ಮತ್ತು ಮೇಲಾಧಿಕಾರಿಗಳ ಅನುಮತಿ ಪಡೆಯದೆ ರಜೆ ಹಾಕಿದ್ದನ್ನು ಪರಿಗಣಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿದ್ದಾರೆ.
ರಹೀಂ ಉಚ್ಚಿಲ್ ಕೊಲೆ ಯತ್ನದ ಬಳಿಕ ಭದ್ರತೆಗಾಗಿ ಅಂಗರಕ್ಷಕನನ್ನು ನಿಯೋಜಿಸಲಾಗಿತ್ತು. ನಗರ ಸಶಸ್ತ್ರ ಮೀಸಲು ಪಡೆಯ ಕಾನ್ ಸ್ಟೇಬಲ್ ಮಲ್ಲಿಕಾರ್ಜುನ ಅವರು ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಹೀಂ ಉಚ್ಚಿಲ್ ಇತ್ತೀಚೆಗೆ ವಿದೇಶಕ್ಕೆ ಹೋಗುವ ಸಂದರ್ಭ ಮಲ್ಲಿಕಾರ್ಜುನ್ ರನ್ನು ಗನ್ ಹಿಡಿಸಿ ಹಿಂಬದಿ ನಿಲ್ಲಿಸಿ ಪೊಟೋ ತೆಗೆಸಿಕೊಂಡು ಬಳಿಕ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರು. ಈ ಕುರಿತು ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಮುರುಗೆಪ್ಪ ಉಪಾಸೆ ಅವರಿಗೆ ಈ ಬಗ್ಗೆ ದೂರು ಬಂಡ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ಸಾಕ್ಷ್ಯ ಲಭಿಸಿತ್ತು. ಅಲ್ಲದೆ ಮಲ್ಲಿಕಾರ್ಜುನ ತನ್ನ ಬಳಿ ಇದ್ದ ಗನ್ ನ್ನು ಸಶಸ್ತ್ರ ಮೀಸಲು ಪಡೆ ಗೆ ಒಪ್ಪಿಸಿ ಮೇಲಾಧಿಕಾರಿಯವರಿಗೆ ರಜೆ ಅರ್ಜಿ ನೀಡದೆ ಒಪ್ಪಿಗೆ ಪಡೆಯದೆ ತನ್ನ ಊರಿಗೆ ಹೋಗಿದ್ದರು. ಕರೆ ಮಾಡಿ ವಿಚಾರಿಸುವಾಗ ತಾನು ರಹಿಂ ಅವರ ಜತೆ ಉಚ್ಚಿಲ್ ಜತೆ ಉಡುಪಿಯಲ್ಲಿರುವುದಾಗಿ ಸುಳ್ಳು ಹೇಳಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.