ಮಂಗಳೂರು, ಜು 08: ಮೂಡುಬಿದಿರೆ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ ಕಾವ್ಯಾಳ ನೆನಪಿನೊಂದಿಗೆ ಜು ೨೦ ರಂದು ನಗರದ ಕಲೆಕ್ಟರ್ ಗೇಟ್ ಬಳಿ ಸಾರ್ವಜನಿಕ ಶ್ರದ್ದಾಂಜಲಿ ಸಭೆ ಮತ್ತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಯಲಿದೆ . ಕಾವ್ಯಾಳ ಸಾವು ಸಂಭವಿಸಿ ಜುಲೈ ೨೦ ಕ್ಕೆ ವರ್ಷವಾಗುತ್ತಿದೆ. ಈ ನಿತ್ಟಿನಲ್ಲಿ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿಯಿಂದ ಬಲ್ಮಠ ಆರ್ಯ ಸಮಾಜದಲ್ಲಿ ವಿಶೇಷ ಹೋಮ ನಡೆಯಲಿದೆ. ಸಂಜೆ ೬ ಕ್ಕೆ ಕಲೆಕ್ಟರ್ ಗೇಟ್ ಬಳಿ ಮೇಣದ ಬತ್ತಿ ಉರಿಸಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಜಸ್ಟೀಸ್ ಫಾರ್ ಕಾವ್ಯ ಹೋರಟ ಸಮಿತಿ ಸಂಚಾಲಕ ದಿನಕರ್ ಶೆಟ್ಟಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಪ್ರಕರಣ ತನಿಖೆಯಲ್ಲಿ ದ.ಕ ಪೊಲೀಸ್ ಇಲಾಖೆ ವಿಫಲವಾಗಿದ್ದು, ಮನವಿಗಳಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮ ಮಗಳ ಸಾವನ್ನು ನಿರ್ಲಕ್ಷ ಮಾಡಲಾಗಿದೆ. ಪ್ರಕರಣನ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಬೇಕು ಎಂದು ಕಾವ್ಯಾಳ ತಾಯಿ ಬೇಬಿ ಪೂಜಾರಿ ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ತಂದೆ ಲೋಕೇಶ್ ಪೂಜಾರಿ, ಸಾಮಾಜಿಕ ಹೋರಾಟಗಾರರಾದ ರಥುವೀರ್ ಸೂಟರ್ ಪೇಟೆ, ರಾಬರ್ಟ್ ರೊಸಾರಿಯೋ ಉಪಸ್ಥಿತರಿದ್ದರು.