ಸುಳ್ಯ,ಸೆ27: ಐವರ್ನಾಡು ಶಾಲಾ ವಠಾರದಲ್ಲಿ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದು ದೇವತೆಗಳ ವೇಷ ಧರಿಸಿ ವಿಡಂಬನಾತ್ಮಕವಾಗಿ ನಡೆದುಕೊಂಡ ಘಟನೆಯನ್ನು ಸುಳ್ಯ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಖಂಡಿಸಿದೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸುಳ್ಯ ವಿಹಿಂಪ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ ಮಾತನಾಡಿ, ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತ ದೇವರ ವೇಷ ಧರಿಸಿ ಯಕ್ಷಗಾನದಲ್ಲಿ ವಿಡಂಬನಾತ್ಮಕವಾಗಿ ನಡೆದುಕೊಂಡಿದ್ದಾರೆ್,ಇದು ಹಿಂದೂಗಳ ನಂಬಿಕೆಗೆ ನೋವು ತಂದಿದೆ. ಇಂತಹ ಕೃತ್ಯವನ್ನು ಖಂಡಿಸುವುದಾಗಿ ತಿಳಿಸಿದರು.ಜಿಲ್ಲಾ ಗೋರಕ್ಷಕ ಪ್ರಮುಖ್ ಲತೀಶ್ ಗುಂಡ್ಯ ಮಾತನಾಡಿ, ಸಚಿವ ಕಾಗೋಡು ಅವರು ಗೋಮಾತೆ ಕುರಿತಾಗಿ ನೀಡಿದ ಹೇಳಿಕೆ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತಂದಿದೆಹಾಗಾಗಿ ಅವರು ಕ್ಷಮೆಯಾಚಿಸಬೇಕು. ಹಿಂದುಗಳ ಮತ ಬೇಡವೆಂದಾದಲ್ಲಿ ಮುಂದಿನ ಚುನಾವಣೆ ವೇಳೆ ಉತ್ತರ ನೀಡುತ್ತೇವೆ ಎಂದರು.
‘ಸಂಘಟಕರಿಂದ ಉದ್ಧಟತನ’
ಐವರ್ನಾಡು ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ವಿಡಂಬನೆ ನಡೆದಿದೆ. ಈ ಸಂದರ್ಭವೇ ಕಾರ್ಯಕ್ರಮ ಸಂಘಟಕರಿಗೆ ತಿಳಿಸಿದ್ದರೂ ವಾದ ನಡೆಸಿ ಉದ್ಧಟತನದಿಂದ ಮಾತನಾಡಿ ಸಮರ್ಥಿಸಿಕೊಂಡಿದ್ದಾರೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಸಂಚಾಲಕರಾದ ರಾಜೇಶ್ ರೈ, ನಗರ ಸಂಚಾಲಕ ಹರಿಪ್ರಸಾದ್ ಗುಂಡ್ಯ ಹಾಗೂ ಪ್ರಶಾಂತ ಕಾಯರ್ತೋಡಿ ಉಪಸ್ಥಿತರಿದ್ದರು.