ಬೆಂಗಳೂರು, ಜು04: ನೀವು ಪೋಟೋ ತೆಗೆದುಕೊಳ್ಳುವಾಗಲೋ ಅಥವಾ ಸೆಲ್ಪೀ ತೆಗೆದುಕೊಳ್ಳುವಾಗಲೋ ಕೈ ಬೆರಳುಗಳಲ್ಲಿ ಥಮ್ಸ್ ಆಪ್, ಅಥವಾ ವಿಜಯದ ಸಂಕೇತ ತೋರಿಸಬೇಡಿ . ಕಾರಣ ಹಾಗೇನಾದ್ರೂ ಮಾಡಿದರೆ ಸೈಬರ್ ಖದೀಮರು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕೋದು ಗ್ಯಾರಂಟಿ.
ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಎಚ್ಚರಿಸುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ರೀತಿ ಪೋಟೋ ತೆಗೆದಾಗ ಸೈಬರ್ ಖದೀಮರಿಗೆ ಬೆರಳಚ್ಚು ಸುಲಭದಲ್ಲಿ ಸಿಗುವ ಲಭ್ಯತೆ ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬೆರಳಚ್ಚುನ್ನು ನಕಲಿ ಮಾಡಿ ನಿಮ್ಮ ಬ್ಯಾಂಕ್ ಖಾತೆಯನ್ನು ಅವರು ಹ್ಯಾಕ್ ಮಾಡಬಹುದು ಇಲ್ಲವೇ ನಿಮಗೆ ಗೊತ್ತಿಲ್ಲದಂತೆ ವೈಯಕ್ತಿಕ ಮಾಹಿತಿಯನ್ನು ಕದ್ದುಬಿಡಬಹುದು ಎಂದು ರೂಪಾ ಎಚ್ಚರಿಸಿದ್ದಾರೆ.