ಕಾಸರಗೋಡು, ಜು 04 : ಕಾಸರಗೋಡು ಬಿ ಎಸ್ ಎನ್ ಎಲ್ ಡಿವಿಜನ್ ಎಂಜಿನಿಯರ್ ಸುಧಾಕರ ರವರ ಕೊಲೆಗೆ ಆಸ್ತಿ ವಿವಾದ ಕಾರಣ ವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುಧಾಕರ್
ಜು. 03 ರ ಮಂಗಳವಾರ ಸಂಜೆ ಘಟನೆ ನಡೆದಿದ್ದು ಕೆಲಸ ಮುಗಿಸಿ ಬೋವಿಕ್ಕಾನ ಮಲ್ಲದಲ್ಲಿರುವ ಮನೆಗೆ ತೆರಳುತ್ತಿದ್ದ ಸುಧಾಕರ ಕೊಲೆಗೀಡಾಗಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ನೆರೆಮನೆಯ ರಾಧಾಕೃಷ್ಣ ಕುಂಬಳೆಯಲ್ಲಿ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾತ್ರಿ ಕುಂಬಳೆ ರೈಲ್ವೆ ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ರಾಧಾಕೃಷ್ಣ ನ ಮೃತದೇಹ ಪತ್ತೆಯಾಗಿದೆ. ರಾಧಾಕೃಷ್ಣ ಮತ್ತು ಸುಧಾಕರ ನಡುವೆ ಹಲವು ವರ್ಷಗಳಿಂದ ಆಸ್ತಿ ವಿವಾದ ಇತ್ತೆನ್ನಲಾಗಿದೆ. ಈ ಪ್ರಕರಣ ನ್ಯಾಯಾಲಯ ಮೇಲೇರಿತ್ತು . ಈ ನಡುವೆ ನ್ಯಾಯಾಲಯದಲ್ಲಿ ಸುಧಾಕರ ಪರ ತೀರ್ಪು ನೀಡಿತ್ತು. ಇದು ರಾಧಾಕೃಷ ನನ್ನು ಕೆರಳಿಸಿ ದ್ವೇಷ ಸಾಧಿಸಲು ಪ್ರೇರಣೆ ಯಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುಧಾಕರ ರ ಮನೆ ಸಮೀಪದ ದಾರಿಯಲ್ಲಿ ರಾಧಾಕೃಷ್ಣರ ಕುಟುಂಬದವರು ತೆರಳುತ್ತಿದ್ದರು . ಹಲವು ಭಾರೀ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಮಂಗಳವಾರ ಸಂಜೆ ಮನೆಯಿಂದ 200ಮೀಟರ್ ದೂರದಲ್ಲಿ ಸುಧಾಕರ ಕತ್ತು ಕೊಯ್ದು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ರಾಧಾಕೃಷ್ಣ ಕುಂಬಳೆಗೆ ತಲಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ರಾಧಾಕೃಷ್ಣನ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಸುಧಾಕರ ರವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ . ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.