ಉಡುಪಿ, ಜು 03 : ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್ ಉಲ್ ಖಾನ್ ಹಾಗೂ ಇವರ ಪತ್ನಿ ವ್ಯವಸ್ಥಿತ ಷಡ್ಯಂತರ ಮಾಡಿ ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಸಂಘಟನೆ ಉಡುಪಿ ಜಿಲ್ಲಾ ಹೆಚ್ಚುವರಿ ಉಪ ಆಯುಕ್ತ (ಎಡಿಸಿ) ಅನುರಾಧಾ ಅವರಿಗೆ ಮನವಿ ಸಲ್ಲಿಸಿತು.
ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆಯ ಉಪ ಆಯುಕ್ತರಾದ ಇರ್ಷಾದ್ ಉಲ್ ಖಾನ್ರವರು ಸರಕಾರಿ ಉನ್ನತ ಹುದ್ದೆಯಲ್ಲಿದ್ದು ಮುಗ್ದ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸುವ ವ್ಯವಸ್ಥಿತ ಷಡ್ಯಂತ್ರ ಹಾಗೂ ಮಾನವ ಕಳ್ಳಸಾಗಣೆಯಂತ ದಂಧೆಯನ್ನು ಪತ್ನಿಯ ಜೊತೆ ಸೇರಿ ಮಾಡುತ್ತಿದ್ದಾರೆ. ಇಂತಹ ಸಮಾಜಘಾತುಕ ಚಟುವಟಿಯಲ್ಲಿ ತೊಡಗಿಸಿಕೊಂಡ ಇವರನ್ನು ಬಂಧಿಸಿ ಸೂಕ್ತವಾದ ತನಿಖೆ ನಡೆಸಬೇಕು ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡ ಕಾರಣಕ್ಕಾಗಿ ವಾಣಿಜ್ಯ ತೆರಿಗೆ ಉಪ ಆಯುಕ್ತ ಹುದ್ದೆಯಿಂದ ಅಮಾನತು ಮಾಡಿ ಎನ್ಐಎ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭ ವಿಹೆಚ್ ಪಿ ಯ ಜಿಲ್ಲಾಧ್ಯಕ್ಷ ಪಿ. ವಿಲಾಸ್ ನಾಯಕ್, ಉಪಾಧ್ಯಕ್ಷ ಪ್ರಮೋದ್ ಶೆಟ್ಟಿ ಮಂದಾರ್ತಿ, ಸಂತೋಷ್ ಸುವರ್ಣ, ಶ್ರೀಧರ್ ಬಿಜೂರು, ಯತೀಶ್ ಬ್ರಹ್ಮಾವರ, , ಲೋಕೇಶ್ ಶೆಟ್ಟಿಗಾರ್, ಪ್ರಖಂಡ ಸಂಚಾಲಕ ರಾಜೇಶ್ ಪಡುಬಿದ್ರಿ, ಜಿಲ್ಲಾ ಸಹಸಂಚಾಲಕ ಗಿರೀಶ್ ಕುಂದಾಪುರ, ಜಿಲ್ಲಾ ಸಹಸಂಚಾಲಕ ಸುಧೀರ್ ನಿಟ್ಟೆ, ಜಿಲ್ಲಾ ಸುರಕ್ಷಾ ಪ್ರಮುಖ್ ಅನಿಲ್ ಮೊದಲಾದರು ಉಪಸ್ಥಿತರಿದ್ದರು.