ಆರ್.ಬಿ.ಜಗದೀಶ್
ಕಾರ್ಕಳ,ಜು 02: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಟ್ಟ ಶಬರಿ ಆಶ್ರಮದಲ್ಲಿ ಮಣ್ಣಿನಿಂದ ನಿರ್ಮಿಸಲಾಗಿದ್ದ ಹಳೆಯದಾದ ಕಟ್ಟಡ ಭಾಗಶಃ ಧರೆಶಾಹಿಯಾಗಿದೆ. ಇದರಿಂದಾಗಿ ಸನ್ನಿಹದಲ್ಲಿರುವ ಅಂಗನವಾಡಿ ಪುಟಾಣಿಗಳ ಭವಿಷ್ಯದ ಮೇಲೂ ಕರಿಛಾಯೆ ಮೂಡುವಂತೆ ಮಾಡಿದೆ. ಕಾರ್ಕಳ ನಗರದ ತೆಳ್ಳಾರು 15 ನೇ ಅಡ್ಡ ರಸ್ತೆಯ ಶಬರಿ ಆಶ್ರಮದಲ್ಲಿ ಇಂತಹದೊಂದು ವಿದ್ಯಮಾನ ನಡೆದಿದ್ದರೂ ಇಲಾಖೆ ಮಾತ್ರ ಇದುವರೆಗೆ ಅದನ್ನು ಗಂಭೀರವೆಂದು ಪರಿಗಣಿಸಿಲ್ಲ.
ಪಕ್ಕದಲ್ಲಿದೆ ಅಂಗನವಾಡಿ
ಶಬರಿ ಆಶ್ರಮದಲ್ಲಿ ಭಾಗಶಃ ಧರೆಗುರುಳಿದ ಕಟ್ಟಡದ ಸನಿಹದಲ್ಲಿ ಅಂಗನವಾಡಿ ಇದೆ. ೧೫ ಪುಟಾಣಿಗಳು ಪ್ರತಿದಿನ ಇಲ್ಲಿಗೆ ಬರುತ್ತಿದ್ದಾರೆ.
ಮೂಲಭೂತ ಸೌಕರ್ಯದ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಅಂಗನವಾಡಿಯ ಪುಟಾಣಿಗಳಿಗೆ ದೇಹ ಭಾದೆ ತೀರಿಸಲು ಪ್ರತ್ಯೇಕವಾದ ಶೌಚಾಲಯ ಇಲ್ಲಿಲ್ಲ. ಶಬರಿ ಆಶ್ರಮದಲ್ಲಿರುವ ಶೌಚಾಯಲವನ್ನೇ ಇವರು ಉಪಯೋಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲಿಗೆ ಹೋಗಬೇಕಾದರೆ ಒಂದಿಷ್ಟು ದೂರು ನಡೆದುಕೊಂಡು ಹೋಗಬೇಕಾಗಿದೆ. ಮಳೆಗಾಲದಲ್ಲಿ ಇದರಿಂದ ಒಂದಿಷ್ಟು ಕಷ್ಟಕರವು ಆಗಿದೆ.
ಭಾಗಶಃ ಕುಸಿದು ಬಿದ್ದಿರುವ ಕಟ್ಟಡ ಸನ್ನಿಹದ ಮೂಲಕವಾಗಿ ಅಂಗನವಾಡಿಗೆ ಹೋಗಿ ಬರಬೇಕಾಗಿದೆ. ಹೆತ್ತವರು ತಮ್ಮ ಮಕ್ಕಳನ್ನು ಅದೇ ದಾರಿಯಾಗಿ ಅಂಗನವಾಡಿಗೆ ಕರೆಕೊಂಡು ಹೋಗಿ ಬರುತ್ತಾರೆ. ದೂರದಲ್ಲಿರುವ ಶೌಚಾಯಲಕ್ಕೂ ಅದೇ ದಾರಿಯಾಗಿದೆ.
ಅಂಗನವಾಡಿ ಕಟ್ಟಡದ ದುರಸ್ಥಿಯಾಗದೇ ಹಲವು ವರ್ಷಗಳೇ ಕಳೆದು ಹೋಗಿದೆ. ಮೇಲ್ಚಾವಣೆ ಸೋರಿಕೆಯಿಂದ ಗೋಡೆಯ ಮೇಲ್ಭಾಗದಲ್ಲಿ ಮಳೆ ನೀರು ಸೋರಿಕೆಯಾಗಿರುವ ಗುರುತು ಕಂಡುಬರುತ್ತಿವೆ. ಪ್ಯಾಂಟಿಂಗ್ ಮಾಡದೇ ಇರುವ ಈ ಕಟ್ಟಡದ ಕಿಟಕಿಗಳು ಮುರಿದು ಬಿದ್ದಿದೆ. ಪರಿಸರದಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದೆ.
ಇಲಾಖೆ ನಿರ್ಲಕ್ಷ್ಯವಹಿಸಿತ್ತೇ?
ಶಾಲೆ ಆರಂಭಗೊಂಡು ಒಂದು ತಿಂಗಳು ಸಂದುತ್ತಾ ಬಂದಿದ್ದರೂ ಇಲಾಖೆಗಳು ಮಾತ್ರ ಇದರತ್ತ ಗಮನ ಹರಿಸದೇ ಇರುವುದು ಈ ಎಲ್ಲಾ ವಿದ್ಯಮಾನದಿಂದ ದೃಢಪಟ್ಟಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಾಗಿರುವುದು ಅತ್ಯಗತ್ಯವಾಗಿತ್ತು. ಶಬರಿ ಆಶ್ರಮದಲ್ಲಿ ಅದೆಷ್ಟೋ ವಿದ್ಯಾರ್ಥಿನಿಯರು ವಾಸ್ತವ್ಯ ಹೂಡಿ ಶಿಕ್ಷಣ ಪೊರೈಸುತ್ತಿರುತ್ತಿರುವುದನ್ನು ಕಣಬಹುದಾಗಿದೆ.
ಅಂಗನವಾಡಿ ಮಕ್ಕಳ ಸುರಕ್ಷತೆ ಹೊಣೆಗಾರಿಕೆ ಸರಕಾರದಾಗಿದೆ. ಪ್ರತಿಯೊಬ್ಬ ಮಕ್ಕಳು ದೇಶದ ಉತ್ತಮ ನಾಗರಿಕನಾಗಿ ರೂಪುಗೊಳ್ಳುವಲ್ಲಿ ಅಂಗನವಾಡಿಯು ಪೀಠಿಕೆಯಾಗಿದೆ. ಅಂಗನಾಡಿಗಳಿಗೆ ಅಗತ್ಯ ಮೂಲಭೂತ ಸೌಕರ್ಯದೊಂದಿಗೆ ಒದಗಿಸುವ ಜವಾಬ್ದಾರಿ ಆಯಾಯ ಇಲಾಖೆಯದಾಗಿದೆ. -ಪದ್ಮಾವತಿ ಅಮೀನ್. ಅಂಗನವಾಡಿ ಕಾರ್ಯಕರ್ತರ ತಾಲೂಕು ಅಧ್ಯಕ್ಷರು