ಮಂಗಳೂರು, ಜು 02: ಚೆನ್ನೈ ಮೂಲದ ತಿರುಪುರ ಚಿಟ್ಸ್ ಪ್ರೈ ಲಿಮಿಟೆಡ್ ಎಂಬ ಹೆಸರಿನ ಚಿಟ್ ಪಂಡ್ ಕಂಪನಿಯೊಂದು ದ. ಕ ಜಿಲ್ಲೆಯ ಸುಮಾರು 200 ಕ್ಕೂ ಅಧಿಕ ಗ್ರಾಹಕರಿಂದ 9 ಕೋಟಿ ಅಧಿಕ ಹಣ ಸಂಗ್ರಹಿಸಿ ವಂಚನೆ ಮಾಡಿರುವ ಬಗ್ಗೆ ಇಕಾನಾಮಿಕ್ ಆಂಡ್ ನಾರ್ಕೋಟಿಕ್ಸ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣ ಸಂಗ್ರಹಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿರುವ ಈ ಕಂಪನಿ ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿತ್ತೆದೆಂದು ಹೇಳಲಾಗಿದ್ದು, ಇದರ ವಿರುದ್ದ ಮಂಗಳೂರಿನ ಅರಾಫತ್ ಅವರು ದೂರು ನೀಡಿದ್ದಾರೆ. ದೂರಿನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಬ್ಬಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದೆ. ದೇಶದಾದ್ಯಂತ ಕೋಟ್ಯಾಂತರ ರೂ ವಂಚಿಸಿದ ಈ ಕಂಪನಿಯ ನಿರ್ದೇಶಕಿ ಸುಮನಾ ಮಂಗಳೂರು ಮೂಲದವರು ಎನ್ನಲಾಗಿದೆ. ಆರಂಭದಲ್ಲಿ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಹಣ ಮರಳಿಸಿ ವಿಶ್ವಾಸ ಗಳಿಸಿಕೊಂಡಿರುವ ಸಂಸ್ಥೆಯೂ ಬಳಿಕ ಹೆಚ್ಚಿನ ಮೊತ್ತದ ಫಂಡ್ ಗೆ ಗ್ರಾಹಕರನ್ನು ಸೇರ್ಪಡೆಗೊಳಿಸಿ ಹಣ ಸಂಗ್ರಹಿಸಿದೆ. ಬಳಿಕ ವಾಪಾಸು ನೀಡುವ ಮೊತ್ತ ಸುಮಾರು 9 ಕೋಟಿ ಮೀರಿದಾಗ ವ್ಯವಹಾರ ನಡೆಸದೆ ಕಚೇರಿಗೆ ಬೇಗ ಹಾಕಿ ಮಾಯವಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಆರಾಫತ್ ಪೊಲೀಸರಿಗೆ ನೀಡಿದ ದೂರಿನಲ್ಲಿ 50 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿದ್ದೆ . ಈ ಕಂಪನಿ ನಷ್ಟದಿಂದ ಬಂದ್ ಆಗುವ ಬಗ್ಗೆ ತಿಳಿದು ಬಂದ ಹಿನ್ನಲೆಯಲ್ಲಿ ವಿಚಾರಿಸಲೆಂದು ಕಂಪನಿಯ ಮುಖ್ಯ ಕಚೇರಿ ಚೆನ್ನೈ ಗೆ ಹೋದಾಗ ಅಲ್ಲಿಯು ಕಚೇರಿಗೆ ಬೀಗ ಜಡಿಯಲಾಗಿತ್ತು. ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಮತ್ತು 7 ಮಂದಿ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿಯಿತು. ಈ ಹಿನ್ನಲೆಯಲ್ಲಿ ನಗರ ನಾರ್ಕೋಟಿಕ್ ಠಾಣೆಯಲ್ಲಿ ದೂರು ನೀಡಲಾಗಿದೆ.