ಮಂಡ್ಯ,ಜು 01: ಕುಕ್ಕರ್ನ ವಿಷಲ್ ನುಂಗಿದ ಒಂದು ವರ್ಷದ ಗಂಡು ಮಗು ದಾರುಣವಾಗಿ ಮೃತಪಟ್ಟ ಮನಕಲುಕುವ ಘಟನೆ ಮಂದ್ಯದ ಮುದ್ದೂರಿನ ನಗರಕೆರೆಯಲ್ಲಿ ಜು 1 ಶನಿವಾರ ನಡೆದಿದೆ. ನಗರಕೆರೆ ಗ್ರಾಮದ ಮರಿಲಿಂಗೇಗೌಡ ಮತ್ತು ರೂಪಾ ದಂಪತಿಯ ಪುತ್ರ ಭುವನ್ ಗೌಡ (1) ಮೃತಪಟ್ಟ ಮಗು.
ಶನಿವಾರ ರಾತ್ರಿ ಎಲ್ಲರೂ ಮನೆಯಲ್ಲಿದ್ದಾಗಲೇ ಆಟವಾಡುತ್ತಿದ್ದ ಮಗು, ಇದ್ದಕಿದ್ದಂತೆ ಕೈಗೆ ಸಿಕ್ಕ ಕುಕ್ಕರ್ ವಿಷಲ್ ನುಂಗಿದೆ. ನಂತರ ಅಳಲು ಆರಂಭಿಸಿದೆ. ಕೂಡಲೇ ಮಗನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಪಟ್ಟಂತೆ ಮದ್ದೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ