ಜು 01: ಸೇನೆ ಮೇಲೆ ಕಲ್ಲು ತೂರಾಟ ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ.. ಇತ್ತಿಚೇಗೆ ಇದರಲ್ಲಿ ಹುಡುಗರೊಂದಿಗೆ ಕಣಿವೆ ರಾಜ್ಯದ ಯುವತಿಯರೂ ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಡುವಂಥ ಘಟನೆಗಳು ಅತಿಯಾಗುತ್ತಿದೆ. ಇಂಥವರನ್ನು ಸಮರ್ಥವಾಗಿ ಎದುರಿಸಲು ಇದೀಗ ಲೇಡಿ ಕಮಾಂಡೋಗಳು ರೆಡಿಯಾಗಿದ್ದಾರೆ. ಇಲ್ಲಿಗೆಂದೆ ನಿಯೋಜಿಸಲ್ಪಡುವ ಲೇಡಿ ಕಮಾಂಡೋಗಳಿಗೆ ಸಿಆರ್ಪಿಎಫ್ ಸ್ಪೆಷಲ್ ಟ್ರೈನಿಂಗ್ ಕೂಡಾ ನೀಡಿದೆ.
ಇನ್ನು ಈ ಲೇಡಿ ಕಮಾಂಡೋಗಳ ಪಡೆಗೆ ”ಸೂಪರ್-500 ” ಎಂದು ಹೆಸರಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಕಲ್ಲು ತೂರಾಟದ ಮೂಲಕ ಭದ್ರತಾಪಡೆ ಗಳಿಗೆ ಅಡ್ಡಿ ಮಾಡುವವರನ್ನು ಮಹಿಳಾ ಕಮಾಂಡೋಗಳಿರುವ "ಕ್ರ್ಯಾಕ್ ಟೀಮ್' ಕಾರ್ಯನಿರ್ವಹಿಸಲಿದೆ. ಇದಕ್ಕೆಂದೆ ಇವರಿಗೆ ಕಠಿಣ ತರಬೇತಿ ನೀಡಲಾಗಿದ್ದು, ರಾತ್ರಿ ಹೊತ್ತಿನಲ್ಲೂ ಇವರು ಕಾರ್ಯಚರಿಸಲು ಸಿದ್ದವಾಗಿರುತ್ತಾರೆ. ಇದಕ್ಕಾಗಿ ಇವರಿಗೆ ಕಣ್ಣಿಗೆ ಪಟ್ಟಿ ಕಟ್ಟಿ ತರಬೇತಿ ನೀಡಲಾಗಿದ್ದು ಜತೆಗೆ ಶಸ್ತ್ರಾಸ್ತ್ರಗಳಲ್ಲಿ ದೋಷ ಕಂಡುಬಂದರೆ ಕೇವಲ ಒಂದೇ ನಿಮಿಷದಲ್ಲಿ ಅದನ್ನು ರಿಪೇರಿ ಮಾಡುವಂಥ ಕೌಶಲ್ಯದ ಬಗ್ಗೆಯೂ ತರಬೇತಿ ನೀಡಲಾಗಿದೆ.