ಉಡುಪಿ, ಜೂ 28 : ಕರಾವಳಿಯಲ್ಲಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ಕುಸಿದು ಆತಂಕ ಸೃಷ್ಟಿಯಾದಂತೆ ಇದೀಗ ಆಗುಂಬೆ ಘಾಟ್ನಲ್ಲೂ ಅಪಾಯ ಎದುರಾಗಿದೆ. ಕಾರಣ ಆಗುಂಬೆ ಘಾಟ್ನ 7 ನೇ ಸುತ್ತಿನಲ್ಲಿ ಭೂ ಕುಸಿತವಾಗಿದ್ದು ಅಪಾಯದ ಅಂಚಿನಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಷೇದಿಸಿಲಾಗಿದೆ.
ರಸ್ತೆಗೆ ಹಾಕಲಾಗಿದ್ದ ಡಾಮಾರು ಮಣ್ಣಿನೊಡನೆ ಕುಸಿದು ಹೋಗಿದ್ದು , ಭೂ ಕುಸಿತ ಹೆಚ್ಚಾದರೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.