ಜೂ, 28 : ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷಗಳೇ ಕಳೆದಿವೆ. ಅತಿ ಹೆಚ್ಚು ವಿದೇಶಿ ಪ್ರವಾಸಗಳನ್ನು ಕೈಗೊಂಡ ಪ್ರಧಾನಿ ಎಂಬ ಹೆಸರುಗಳಿಸಿದ ನರೇಂದ್ರ ಮೋದಿಗೆ ಇಲ್ಲಿಯವರೆ ಮಾಡಿದ ವಿದೇಶಿ ಪ್ರವಾಸಗಳ ಸಂಖ್ಯೆ 41. ಈ ಸಂದರ್ಭದಲ್ಲಿ 52 ದೇಶಗಳನ್ನು ಭೇಟಿಯಾಗಿದ್ದಾರೆ.
ಆರ್ ಟಿ ಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ಮಾಹಿತಿ ಪಡೆದಿದ್ದು, ಇದರಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಪ್ರಧಾನಿ ಸುಮಾರು 41 ವಿದೇಶ ಪ್ರವಾಸ ಮಾಡಿ , 52 ದೇಶಗಳಿಗೆ ಭೇಟಿ ಕೊಟ್ಟು ಸುಮಾರು 355 ಕೋಟಿ ರು ಖರ್ಚು ಮಾಡಿದ್ದಾರೆ ಹಾಗೂ 165 ದಿನ ವಿದೇಶದಲ್ಲಿ ಕಳೆದಿದ್ದಾರೆ.
ಈ ಪ್ರವಾಸದಲ್ಲಿ ಪ್ರಧಾನಿ 2015ರ ಏಪ್ರಿಲ್ ನಲ್ಲಿ ಮೂರು ರಾಷ್ಚ್ರಗಳ 9 ದಿನಗಳ ಪ್ರವಾಸ ಮಾಡಿದ್ದರು. ಈ ಸಂದರ್ಭ ಅವರು ಫ್ರಾನ್ಸ್, ಜರ್ಮನಿ ಹಾಗೂ ಕೆನಡಾಗಳಿಗೆ ಭೇಟಿ ಕೊಟ್ಟಿದ್ದರು.. ಈ ಪ್ರವಾಸಕ್ಕೆ ತಗುಲಿದ ವೆಚ್ಚ 31,25,78,000 ರೂಗಳಾಗಿದ್ದು ಇದೇ ಅವರ ಅಧಿಕ ವೆಚ್ಚದ ಪ್ರವಾಸವಾಗಿದೆ. ಅಲ್ಲದೆ ಪ್ರಧಾನಿ 2014ರ ಜೂನ್ 15, 16 ರ ನಡುವೆ ಭೂತಾನ್ ಭೇಟಿಗೆ , 2,45,27,ರೂ ಹಣ ವೆಚ್ಚವಾಗಿದೆ.
ಇನ್ನು ಆರ್ ಟಿ ಐ ಕಾರ್ಯಕರ್ತರು ಪ್ರಧಾನ ಮಂತ್ರಿಗಳ ಕಾರ್ಯಾಲಯ ನನಗೆ ಸರಿಯಾದ ಮಾಹಿತಿ ನೀಡಿಲ್ಲ ಕಾರಣ ನಾನು ಪ್ರಧಾನಿ ಮೋದಿಯ ದೇಶಿಯ ಪ್ರಯಾಣ ಹಾಗೂ ದೇಶಿಯ ಪ್ರವಾಸದ ಸಂದರ್ಭದಲ್ಲಿ ತಗುಲಿರುವ ವೆಚ್ಚ ್ಹಾಗೂ ಭದ್ರತಾ ಸಿಬ್ಬಂದಿ ಖರ್ಚಿನ ಬಗ್ಗೆ ಮಾಹಿತಿ ಕೇಳಿದ್ದೆ ಇದನ್ನು ನೀಡಲು ಪಿಎಂಓ ನಿರಾಕರಿಸಿದೆ ಎಂದು ಆ ರ್ ಟಿ ಐ ಕಾರ್ಯಕರ್ತಹೇಳಿದ್ದಾರೆ.