ಸುಳ್ಯ ಜೂ 28: ಹಾಲು ಸೊಸೈಟಿಗೆ ಹೋಗಿ ಹಾಲು ಕೊಟ್ಟು ಹಿಂದಿರುಗುವ ವೇಳೆ ಯುವತಿಯನ್ನು ಪುಸಲಾಯಿಸಿ, ಮೂವರು ಯುವಕರು ರಿಕ್ಷಾದಲ್ಲಿ ಕರೆದೊಯ್ಯದ್ದು ರಬ್ಬರ್ತೋಟದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುಳ್ಯ ಸಮೀಪದ ಅಮರಪಡ್ನೂರು ಗ್ರಾಮದ ಶೇಣಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಅಮರಮುಡ್ನೂರು ಗ್ರಾಮದ ಕುಡುಂಬಿಲ ಜಯಪ್ರಕಾಶ್(25), ಅಮರಪಡ್ನೂರು ಗ್ರಾಮದ ನೇಣಾರು ರಂಜಿತ್ ಎನ್.ಕೆ(20), ಅಮರಮುಡ್ನೂರು ಗ್ರಾಮದ ನೇರ್ಲಡ್ಕ ರವೀಂದ್ರ(35) ಇವರನ್ನು ಚೊಕ್ಕಾಡಿಯಲ್ಲಿ ಬೆಳ್ಳಾರೆ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪೋಲಿಸರು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಎಸ್ಪಿ ರವಿಕಾಂತೇ ಗೌಡ ಆದೇಶದಂತೆ ಹೆಚ್ಚುವರಿ ಎಸ್ಪಿ ಸಜೀತ್, ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಸುಳ್ಯ ವೃತ್ತನಿರೀಕ್ಷಕ ಸತೀಶ್ಕುಮಾರ್ ಮಾರ್ಗದರ್ಶನದಲ್ಲಿ ಬೆಳ್ಳಾರೆ ಠಾಣಾಧಿಕಾರಿ ಈರಯ್ಯ, ಅಪರಾಧ ವಿಭಾಗದ ಟಿ.ಎಂ.ಭಾಸ್ಕರ್, ಸುಧಾಕರ್, ಬಾಲಕೃಷ್ಣ, ಕೃಷ್ಣಪ್ಪ, ಚಂದ್ರಶೇಖರ, ಪ್ರವೀಣ, ಮಂಜುನಾಥ, ಜ್ಯೋತಿ ಭಾಗವಹಿದ್ದರು.