ಬೆಳ್ತಂಗಡಿ ಜೂ 27: ಚಾರ್ಮಾಡಿ ಘಾಟ್ ಕುಸಿತದಿಂದಾಗಿ ಶಿರಾಡಿ ಘಾಟ್ ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಹೀಗಾಗಿ ಜುಲೈ 5 ರ ಬಳಿಕ ಈ ಮಾರ್ಗವನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲು ತಯಾರಿ ನಡೆಸಿತ್ತು. ಆದರೆ ಈ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದ್ದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನು ಹತ್ತು ದಿನ ತಗಲುವ ಸಾಧ್ಯತೆಗಳು ಇವೆ. ಕಾರಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಜರ್ಮನಿಯಿಂದ ಅಮದು ಮಾಡಿಕೊಂಡಿರುವ ಸೆನ್ಸಾರ್ ಪೇವರ್ ಯಂತ್ರದಲ್ಲಿ ತಾಂತ್ರಿಕ ದೋಷ ಹಾಗೂ ಮಳೆಯಿಂದಾಗಿ ನಿರ್ಮಾಣವಾಗಿರುವ ಅನಾನುಕೂಲ ವಾತಾವರಣ.
ಶಿರಾಡ್ ಘಾಟ್ ನ ಎರಡನೇ ಹಂತದ ಕಾಮಗಾರಿಯ ಗುತ್ತಿಗೆ ಪಡೆದಿರುವ ಮಂಗಳೂರಿನ ಓಷನ್ ಕನ್ ಸ್ಟ್ರಕ್ಷನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯೂ ಜರ್ಮನಿಯ ವಿರ್ಟ್ಜರ್ ಕಂಪನಿಯಿಂದ 10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೆನ್ಸ್ರ್ ಪೇವರ್ ಯಂತ್ರ ಆಮದು ಮಾಡಿಕೊಂಡಿದೆ. ಈ ಯಂತ್ರ ತಾಂತ್ರಿಕ ದೋಷದಿಂದ ಕಳೆದ ಕೆಲವು ವಾರ ಸ್ಥಗಿತಗೊಂಡಿತ್ತು. ಇದು ಕಾಮಗಾರಿ ವಿಳಂಬಕ್ಕೆ ಕಾರಣ . ಇದು ಸ್ಠಳೀಯ ತಾಂತ್ರಿಕ ಸಿಬ್ಬಂದಿ ಮಾಡಿದ ಪ್ರಯತ್ನ ಕಾರ್ಯ ಸಫಲವಾಗಿರಲಿಲ್ಲ. ಬಳಿಕ ಜರ್ಮನ್ ನಿಂದ ಅದೇ ಕಂಪನಿಯ ತಂತ್ರಜ್ಞರು ಬಂದು ದುರಸ್ತಿ ಮಾಡಿದ ಬಳಿಕ ಮತ್ತೆ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದೆ.