ಸುಳ್ಯ, ಜೂ 26: ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಶೇಣಿ ಎಂಬಲ್ಲಿ ನಾಲ್ಕು ಜನರ ಯುವಕರ ತಂಡ ರಿಕ್ಷಾದಲ್ಲಿ ಕರೆದೊಯ್ಡು ರಬ್ಬರ್ ತೋಟದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜೂ.26 ಸೋಮವಾರ ಸಂಜೆ ವರದಿಯಾಗಿದೆ.
ಯುವತಿ ಮನೆಯಿಂದ ಪಕ್ಕದ ಹಾಲು ಡೈರಿಗೆ ಹಾಲು ಕೊಂಡು ಹೋಗಿ ಬರುತ್ತಿದ್ದ ಸಂದರ್ಭ ನಾಲ್ಕು ಜನರ ಯುವಕರ ತಂಡ ಹುಡುಗಿಯನ್ನು ತಡೆದು ನಿಲ್ಲಿಸಿ ರಿಕ್ಷಾದಲ್ಲಿ ಕುಳ್ಳಿರಿಸಿ ಕರೆದೊಯ್ದು ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.