ಮಂಗಳೂರು, ಜ. 05 (DaijiworldNews/MB) : ನಾರ್ಲಾ ಪಡೀಲ್ನ ದಕ್ಷಿಣ ಕನ್ನಡ ಉನ್ನತ ಪ್ರಾಥಮಿಕ ಶಾಲೆಯ ಶಾಲಾ ಮಕ್ಕಳು ಹಲವಾರು ವರ್ಷಗಳಿಂದ ಹಣ್ಣುಗಳು ಮತ್ತು ತೆಂಗಿನಕಾಯಿಯ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಆದರೆ ಕೆಲವು ದುಷ್ಕರ್ಮಿಗಳು ಇದಕ್ಕೆ ಬೆಂಕಿ ಹಚ್ಚಿದ್ದು ಈಗ ಸಸಿಗಳು ನಾಶವಾಗಿದೆ. ಕೆಲ ಸಮಯದವರೆಗೂ ಸಸಿಗಳು ಉರಿಯುತ್ತಿದ್ದರೂ ಕೂಡಾ ಯಾರೂ ಕುಡಾ ನಂದಿಸಲು ಮುಂದಾಗಿಲ್ಲ ಎಂದು ಹೇಳಲಾಗಿದೆ.
ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದ ಸಂದರ್ಭದಲ್ಲಿ ಇಲ್ಲಿನ ದುರ್ಗಾ ಸೇವಾ ಸಮಿತಿ ಸದಸ್ಯರು ಈ ಹಿಂದೆ ಈ ಸಸಿಗಳು ಇರುವ ಪ್ರದೇಶಕ್ಕೆ ಕಾಂಪೌಂಡ್ ಹಾಕುವಂತೆ ಮನವಿ ಮಾಡಿದ್ದರು. ಸೂಕ್ತ ವ್ಯವಸ್ಥೆ ಮಾಡುವುದಾಗಿ ಪಂಚಾಯಿತಿಯ ಹಿರಿಯ ಅಧಿಕಾರಿಗಳೂ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ.
ಸಂಬಂಧಪಟ್ಟ ಅಧಿಕಾರಿಗಳ ಬೆಂಬಲವಿಲ್ಲದ ಕಾರಣ, ತಲಪಾಡಿಯ ದುರ್ಗಾ ಸೇವಾ ಸಮಿತಿ ಸದಸ್ಯರು, ಶಾಲಾ ಮಕ್ಕಳು ಮತ್ತು ಸ್ಥಳೀಯ ನಾಗರಿಕರು ತಮ್ಮ ಬೇಡಿಕೆಗಳ ಪೂರೈಕೆಗೆ ಪಕ್ಷದ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ.