ಜೂ, 26 : ಮದರಸಾ ಶಿಕ್ಷಣ ಪದ್ದತಿಯ ಆಮೂಲಾಗ್ರ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ವಿಶೇಷ ಗುರುತಿನೊಂದಿಗೆ ಜಿಪಿಎಸ್ ಮೂಲಕ ದೇಶದಲ್ಲಿರುವ ಮದರಸಾಗಳನ್ನು ಗುರುತಿಸುವುದು ಹಾಗೂ ಇಂದಿನ ಶೈಕ್ಷಣಿಕ ಅಗತ್ಯಗಳಿಗೆ ತಕ್ಕಂತೆ ಅವುಗಳ ಗುಣಮಟ್ಟ ಸುಧಾರಿಸುವುದು ಯೋಜನೆಯ ಪ್ರಮುಖ ಅಂಶವಾಗಿದೆ.
ಸ್ಕೀಮ್ ಟು ಪ್ರವೈಡ್ ಕ್ವಾಲಿಟಿ ಎಜುಕೇಷನ್ ಇನ್ ಮದರಸಾ ಹೆಸರಿನ ಸುಧಾರಣಾ ಯೋಜನೆಯಡಿ ಅನೇಕ ಕ್ರಮಗಳಿಗೆ ಸರ್ಕಾರ ಮುಂದಾಗಿದೆ. ಕೇಂದ್ರದ ಅನುದಾನ ಪಡೆಯಬೇಕೆಂದರೆ ಮದರಸಾಗಳು ಇನ್ಮುಂದೆ ಮದರಸಾ ಬೋರ್ಡ್ ಅಥವಾ ರಾಜ್ಯ ಶಿಕ್ಷಣ ಮಂಡಳಿಗಳಿಂದ ಅನುಮೋದನೆ ಪಡುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಶಿಕ್ಷಣ ಪದ್ದತಿಗೆ ಸರಿಸಮನಾಗಿ ಮದರಸಾಗಳಲ್ಲಿ ಮಕ್ಕಳು ಗುಣಮತ್ಟದ ಶಿಕ್ಶಣ ಪಡೆಯಬೇಕು ಎಂಬುವುದು ಇದರ ಉದ್ದೇಶವಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳು ತಿಳಿಸಿವೆ.
ಈಗಾಗಲೇ ರಾಜ್ಯ ಸರ್ಕಾರವು ಈ ಸಂಬಂಧ ಪ್ರಸ್ತಾವಗಳನ್ನು ಸಲ್ಲಿಸಿದ್ದು ಅವುಗಳ ಅಧ್ಯಯನ ನಡೆಸಲಾಗುತ್ತಿದೆ. ಬಜೆಟ್ ಅನುದಾನದ ಮೇಲೆ ಮದರಸಾಗಳ ಶಿಕ್ಷಣ ಗುಣಮಟ್ಟ ಸುಧಾರಣೆಯ ಯೋಜನೆ ರೂಪುರೇಷೆ ಸಿದ್ದಗೊಳ್ಳುತ್ತಿದೆ.