ಮಂಗಳೂರು, ಜೂ 25: ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಸಿಬ್ಬಂದಿಯೊಬ್ಬರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಲ್ಮಠದಲ್ಲಿಂದು ಜೂ 25 ರ ಬೆಳಗ್ಗೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಪೊಲೀಸ್ ಸಿಬ್ಬಂದಿಯಾದ ಪಿಎಸ್ಸೈ ಪದ್ಮಯ್ಯ ರಾಣೆ ಎಂಬವರ ಪುತ್ರ ಅಂಕಿತ್ ರಾಣೆ(28) ಎಂದು ಗುರುತಿಸಲಾಗಿದೆ. ಬಲ್ಮಠದಲ್ಲಿರುವ ಸಿಎ ಕಚೇರಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅಂಕಿತ್ ಇದೇ ಕಚೇರಿಯ ಸ್ಟೋರ್ ರೂಮ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇವರು ಮೂಲತಃ ಶಿವಮೊಗ್ಗದವರಾಗಿದ್ದು ಬಲ್ಮಠದಲ್ಲಿ ವಾಸ್ತವ್ಯ ಹೂಡಿದ್ದರು.