ಕಾಸರಗೋಡು, ಡಿ.30 (DaijiworldNews/PY): ಜಿಲ್ಲಾ ಪಂಚಾಯತ್ ಎಲ್ಡಿಎಫ್ ಪಡೆದುಕೊಂಡಿದ್ದು, 17 ಮಂದಿ ಸದಸ್ಯ ಬಲದಲ್ಲಿ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಎಲ್ಡಿಎಫ್ 8 ಮತ್ತು ಯುಡಿಎಫ್ 7 ಸ್ಥಾನಗಳನ್ನು ಪಡೆದಿದೆ.
ಬೇಬಿ ಬಾಲಕೃಷ್ಣನ್ ಅಧ್ಯಕ್ಷೆಯಾಗಿ, ಪಕ್ಷೇತರ ಸದಸ್ಯ ಶಾನ್ ವಾಜ್ ಪಾದೂರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಯುಡಿಎಫ್ನ ಜಮೀಲಾ ಸಿದ್ದಿಕ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೋಮೋನ್ ಜೋಸೆಫ್ ತಲಾ 7 ಮತಗಳನ್ನು ಪಡೆದರು. ಇದರಿಂದ ಯುಡಿಎಫ್ನಿಂದ ಜಿಲ್ಲಾ ಪಂಚಾಯತ್ನ ಅಧಿಕಾರವನ್ನು ಎಲ್ಡಿಎಫ್ ಕಸಿದುಕೊಂಡಿದೆ.
ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಚುನಾವಣೆಯನ್ನು ನಿಯಂತ್ರಿಸಿದರು.