ಮೈಸೂರು, ಜೂ 21: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರ ವಿದ್ಯಾರಣ್ಯಪುರಂ ನಲ್ಲಿರುವ ಕಚೇರಿಯಲ್ಲಿ ಪ್ರೇಮ ಕುಮಾರಿ ಧಿಡೀರ್ ಪ್ರತ್ಯಕ್ಷರಾಗಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಇಂದು ನಡೆದಿದೆ.
ಶಾಸಕ ರಾಮದಾಸ್ ಅವರ ಕಚೇರಿ ಬಳಿ ಆಗಮಿಸಿದ ಪ್ರೇಮಕುಮಾರಿ, ಚುನಾವಣೆ ಸಂದರ್ಭದಲ್ಲಿ ನನಗೆ ಜೀವನ ನೀಡುವುದಾಗಿ ರಾಮದಾಸ್ ಹೇಳಿದ್ದರು. ಗೆದ್ದ ನಂತರ ಕೈಬಿಟ್ಟಿದ್ದಾರೆ, ರಾಜಕೀಯ ಜೀವನಕ್ಕಾಗಿ ನನ್ನನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಮದಾಸ್ ಅವರಿಗಾಗಿಯೇ ನಾನು ರಾಜಕೀಯ ಕ್ಷೇತ್ರ ಬಿಟ್ಟಿದ್ದೇನೆ, ಕೃಷ್ಣ ರಾಜ ಕ್ಷೇತ್ರವನ್ನು ಅವರಿಗಾಗಿ ಬಿಟ್ಟು ಕೊಟ್ಟು, ಚುನಾವಣೆಯಿಂದ ಹಿಂದೆ ಸರಿದಿದ್ದೆ. ಎಂದು ಹೇಳಿದ ಪ್ರೇಮಾಕುಮಾರಿ, ನನಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ವಿಷಯ ತಿಳಿದ ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಪ್ರೇಮಾಕುಮಾರಿ ಅಲ್ಲಿಂದ ತೆರಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಶಾಸಕ ರಾಮದಾಸ್ ವಿರುದ್ದ ಕೃಷರಾಜ ಕ್ಷೇತ್ರ ಸ್ಪರ್ಧೆಗಿಳಿದಿದ್ದ ಪ್ರೇಮಕುಮಾರಿ ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದರು.