ಬೆಳ್ತಂಗಡಿ, ಜೂ 19: ಚಾರ್ಮಾಡಿಯಲ್ಲಿ ಸತತ ಮಳೆಯಿಂದ ಜೂ.12 ರಂಡು ಚರ್ಮಾಡಿ ಘಾಟಿ ಬಂದ್ ಆಗಿದ್ದು, ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಎಸ್ಪಿ ಅಣ್ಣಮಲೈ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಜೀಪ್ ದೂಡುತ್ತಿರುವ ವಿಡೀಯೋ ವೈರಲ್ ಆಗಿದೆ.
ಜೂ.12 ರಂದು ಬೆಳಗ್ಗೆ ಬೆಳ್ತಂಗಡಿ ಕಡೆಯಿಂದ ಆಗಮಿಸಿದ್ದ ಶಾಸಕ ಪೂಂಜಾ ಅವರು ಮಣ್ಣು ಕುಸಿದಿದ್ದ ಜಾಗದಿಂದ ಮುಂದಕ್ಕೆ ತೆರಳಿದ್ದರು. ಅಲ್ಲಿನ ಕಾರ್ಯಚರಣೆ ವೇಳೆ ಹಾಜರಿದ್ದು, ಸೂಕ್ತ ವ್ಯವಸ್ಥೆ ಮಾಡುತ್ತಿದ್ದರು. ಈ ವೇಳೆ ನಿಂತಿದ್ದ ವಾಹನಗಳನ್ನು ಗಮನಿಸಿದ್ದಾರೆ. ಮತ್ತೊಂದು ಭಾಗದಿಂದ ಎಸ್ಪಿ ಅಣ್ಣಮಲೈ ಅವರೂ ಆಗಮಿಸಿದ್ದು, ಕೆಸರಿನಲ್ಲಿ ಹೂತು ಹೋಗಿದ್ದ ಜೀಪ್ ಗಮನಿಸಿದ್ದಾರೆ. ಇಬ್ಬರೂ ಜತೆಯಾಗಿ ಇತರ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಜತೆ ಜೀಪನ್ನು ದೂಡಿದ್ದಾರೆ. ಈ ವೇಳೆ ಅಣ್ಣಾಮಲೈ ಅವರ ಕಾಲು ಪೂರ್ತಿಯಾಗಿ ಕೆಸರಿನಲ್ಲಿ ಮುಳುಗಿತ್ತು. ಯುವ ಜನತೆಗೆ ಮಾದರಿಯಾಗಿರುವ ಇಬ್ಬರೂ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ.