ಬೆಳ್ತಂಗಡಿ, ಜೂ 17 : ಅನ್ಯಕೋಮಿನ ಯುವತಿಯರನ್ನು ಸಂಪರ್ಕಿಸಿ ಪುಸಲಾಯಿಸಿ ಸಲುಗೆಯಿಂದ ವರ್ತಿಸುತ್ತಿದ್ದ ಕೆ.ಎಸ್ ಆರ್ ಟಿ ಸಿ ನಿರ್ವಾಹಕ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡೆಸಿದ ಪ್ರಕರಣ ಬೆಳ್ತಂಗಡಿ ನಡೆದಿದೆ.
ಆರೋಪಿ ಇಸುಬು ಅಲಿ (35) ಯನ್ನು ಬೆಳ್ತಂಗಡಿ ಪೊಲೀಸರು ಲಾಯಿಲದಿಂದ ವಶಕ್ಕೆ ಪಡೆದಿದ್ದಾರೆ. ಈತ ಮೂಡುಬಿದಿರೆ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿತ್ರದುರ್ಗಾ ಮೂಲದ ಹುಡುಗಿ ಜತೆ ಅನುಚಿತವಾಗಿ ವರ್ತಿಸುತ್ತಾ ವೇಳೆ ಸಾರ್ವಜನಿಕ ಮಾಹಿತಿ ಮೇರೆಗೆ ಪೊಲೀಸರು ವಸಕ್ಕೆ ಪಡೆದಿದ್ದಾರೆ.ಸಾರ್ವಜನಿಕ ಶಾಂತಿಗೆ ಧಕ್ಕೆ ತಂದ ವಿಚಾರದಲ್ಲಿ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆಯೂ ಈತ ವಿವಿಧೆಡೆ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭಿಸಿದೆ. ಈ ವೇಳೆ ಠಾಣೆಗಳಲ್ಲಿ ಮುಚ್ಚಳಿಕೆಯನ್ನು ನೀಡಿದ್ದಾನೆ ಎನ್ನಲಾಗಿದೆ.