ಮಂಗಳೂರು, ಡಿ.16 (DaijiworldNews/PY): ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಡಿ.16ರ ಬುಧವಾರದಂದು ನಡೆದಿದೆ.
ಮೃತರನ್ನು ಗ್ರೆಟಾ ಡಿಸೋಜಾ(40) ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಗ್ರೆಟಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ನಿದ್ರೆಯ ಸಮಸ್ಯೆಯ ಬಗ್ಗೆ ಅವರು ತಮ್ಮ ಕೆಲ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.