ಮಂಗಳೂರು, ಡಿ.16 (DaijiworldNews/MB) : ಮಾದಕವಸ್ತು ವಿರೋಧಿ ಅಭಿಯಾನದ ಮುಂದುವರಿದ ಭಾಗವಾಗಿ ವಿಶೇಷ ಫೋನ್ ಇನ್ ಕಾರ್ಯಕ್ರಮವನ್ನು ಶುಕ್ರವಾರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ನಡೆಸಲಿದ್ದಾರೆ.
ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಅವರು ಅಪರಾಧ ತಡೆಗಟ್ಟುವ ಅಂಗವಾಗಿ ಮಾದಕವಸ್ತು ವಿರೋಧಿ ಅಭಿಯಾನಕ್ಕೆ ಮಂಗಳವಾರ ಆಯುಕ್ತರ ಕಚೇರಿಯಲ್ಲಿ ಚಾಲನೆ ನೀಡಿದರು. ಇದರ ಮುಂದುವರಿದ ಭಾಗವಾಗಿ ಡಿಸೆಂಬರ್ 18 ರ ಶುಕ್ರವಾರ ವಿಶೇಷ ಫೋನ್ ಇನ್ ಕಾರ್ಯಕ್ರಮವನ್ನು ಅವರು ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ 12 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು 08242220801 ಕ್ಕೆ ಕರೆ ಮಾಡಿ ಆಯುಕ್ತರೊಂದಿಗೆ ಮಾತನಾಡಬಹುದಾಗಿದೆ.
ಮಂಗಳವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಅವರು, ಸಾರ್ವಜನಿಕ ಮತ್ತು ಅಪರಾಧ ನಿಯಂತ್ರಣ ದೃಷ್ಟಿಕೋನದಿಂದ ಮಾದಕವಸ್ತು ವಿರೋಧಿ ಅಭಿಯಾನ ಬಹಳ ಮುಖ್ಯ ಎಂದು ಹೇಳಿದ್ದರು.