ಮಂಗಳೂರು, ಡಿ.16 (DaijiworldNews/MB) : ಇನ್ಲ್ಯಾಂಡ್ ಬಿಲ್ಡರ್ಸ್ರವರು ತನ್ನ ಅಲ್ಟ್ರಾ ಮಾಡರ್ನ್ ವಾಣಿಜ್ಯ ಯೋಜನೆಯಾದ "ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್"ನ ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ 17 ಗುರುವಾರದಂದು ನಗರದ ಬಿಜೈಯಲ್ಲಿ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಪೂಜೆ, ದುವಾ, ಪ್ರಾರ್ಥನೆಯೊಂದಿಗೆ ನೆರವೇರಲಿದೆ.
''ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್'' ತಳ, ನೆಲಮಹಡಿ ಮತ್ತು 4 ಆಂತಸ್ತುಗಳನ್ನು ಹೊಂದಿದ್ದು 345 ಚದರ ಅಡಿಯಿಂದ 4955 ಚದರ ಅಡಿವರೆಗಿನ ಆವರಣಗಳನ್ನು ಹೊಂದಿದೆ. ಮುಂಬೈನ ತಜ್ಞ ವಾಸ್ತುಶಿಲ್ಪಿಗಳು ಹಲವಾರು ನವೀನ ಕಟ್ಟಡ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ. ಈ ಮಳಿಗೆಯು ಉತ್ತಮವಾದ ಕಾರ್ ಪಾರ್ಕ್ ವ್ಯವಸ್ಥೆ, 2ಲಿಫ್ಟ್, ವಿಶಾಲ ಹಾಗೂ ಭವ್ಯವಾದ ಲಾಬಿ ಮತ್ತು ಕಡಿಮೆ ಇಂಧನ ಶಕ್ತಿದಕ್ಷತೆಯ ವ್ಯವಸ್ಥೆಯನ್ನು ಹೊಂದಿದೆ.
ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಬಿಜೈ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತಿದ್ದು, ಕೆ.ಎಸ್.ಆರ್.ಟಿ.ಸಿ. ಮತ್ತು ಭಾರತ್ ಮಾಲ್ಗೆ ಅತ್ಯಂತ ಸಮೀಪದಲ್ಲಿದೆ. ಈ ಪ್ರದೇಶವು ಎಂ.ಜಿ ರೋಡ್ ಮತ್ತು ವಿಮಾನ ನಿಲ್ದಾಣದ ನಡುವಿನ ಪ್ರಮುಖ ಮಾರ್ಗವಾಗಿದ್ದು ವೇಗವಾಗಿ ಅಭಿವೃದ್ದಿಗೊಳ್ಳುತ್ತಿರುವ ವಾಣಿಜ್ಯ ಕೇಂದ್ರವಾಗಿದೆ. ಪ್ರಧಾನಮಂತ್ರಿಯವರ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರು ಈಗಾಗಲೇ ಸೇರ್ಪಡೆಗೊಂಡಿದೆ. ಅಂತೆಯೇ ವಿಮಾನ ನಿಲ್ದಾಣ ಬಂದರು ಹಾಗೂ ಐಟಿ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಇದರಿಂದ ವಾಣಿಜ್ಯ ಸಂಕೀರ್ಣಕ್ಕೆ ಭಾರೀ ಬೇಡಿಕೆಯು ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಹೂಡಿಕೆ ಮಾಡುತ್ತಿರುವ ಬಹುತೇಕ ಕಂಪೆನಿಗಳು ಆಧುನಿಕ ಹಾಗೂ ಉತ್ತಮ ಗುಣಮಟ್ಟದ ಕಚೇರಿಯ ಸ್ಥಳಾವಕಾಶವನ್ನು ಹುಡುಕುತ್ತಿವೆ. ನಗರದಲ್ಲಿ ಪ್ರಮುಖ ಶೋ ರೂಂಗಳನ್ನು ಸ್ಥಾಪಿಸಲು ಬಯಸುವ ದೊಡ್ಡ ದೊಡ್ಡ ಆಭರಣ, ಜವಳಿ ಉದ್ಯಮದಾರರು ಮತ್ತು ಗ್ರಾಹಕ ಬ್ರಾಂಡ್ಗಳಿಂದ ಬೇಡಿಕೆ ಹೆಚ್ಚುತ್ತಿದೆ. ಶಿಪ್ಪಿಂಗ್, ಕ್ಲಿಯರೆನ್ಸ್, ಲಾಜೆಸ್ಟಿಕ್, ವಿಮಾ ಉದ್ಯಮದವರು ಮಂಗಳೂರು ಬಂದರಿನಿಂದ ಸ್ವಲ್ಪವೇ ದೂರದಲ್ಲಿರುವ ಈ ಪ್ರದೇಶದಲ್ಲಿ ಬಾಡಿಗೆ ಅಥವಾ ತಮ್ಮದೇ ಒಡೆತನದ ಮಳಿಗೆಗಳನ್ನು ಹುಡುಕುತಿದ್ದಾರೆ. ಬಿಜೈ ಪರಿಸರದಲ್ಲಿ ಹಲವಾರು ಬಹುಮಹಡಿ ಕಟ್ಟಡಗಳು ಪೂರ್ಣಗೊಳ್ಳುತ್ತಿದ್ದು ವೈದ್ಯಕೀಯ ಸೇವೆಗಳ ಬೇಡಿಕೆಯು ಅಲ್ಪಾವದಿಯಲ್ಲಿ ಏರಿಕೆಯಾಗುವ ಮುನ್ಸೂಚನೆ ಇದೆ. ಕಿಕ್ಕಿರಿದ ಜನಸಂದಣಿಯಿಂದಾಗಿ ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿರುವ ಫಳ್ನೀರ್ ಮತ್ತು ಹಂಪನ್ಕಟ್ಟೆ ಪ್ರದೇಶದಿಂದ ವೈದ್ಯರುಗಳು ಉತ್ತಮ ಸ್ಥಳಾವಕಾಶವಿರುವ ಪ್ರದೇಶಗಳನ್ನು ಬಯಸುತ್ತಾರೆ. ಅಂತಹ ಉದ್ಯಮದಾರರಿಗೆ ಇದು ಒಂದು ಉತ್ತಮ ಅವಕಾಶ.
ತಮ್ಮ ವವ್ಯಹಾರವು ಮೊದಲಿನಿಂದಲೂ ಬದಲಾಗುತ್ತಿರುವ ಪ್ರವೃತ್ತಿಗಳನ್ನು ಮುಂಚಿತವಾಗಿ ಗುರುತಿಸಿಕೊಂಡು ಅದಕ್ಕೆ ತಕ್ಕಂತೆ ಆಧುನಿಕ ಮತ್ತು ಗುಣಮಟ್ಟದ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳನ್ನು ಗ್ರಾಹಕರಿಗೆ ತಲುಪಿಸಿದ್ದೇವೆ. ಮುಂದಿನ 5 ವರ್ಷಗಳಲ್ಲಿ ಮಂಗಳೂರು ವ್ಯಾಪಾರ ನಗರವಾಗಿ ಪರಿವರ್ತನೆಗೊಳ್ಳಲಿದೆ. ಅನೇಕ ಅನಿವಾಸಿ ಭಾರತೀಯರು ಭಾರತಕ್ಕೆ ಮರಳುತ್ತಿದ್ದು, ವಾಣಿಜ್ಯ ಕಚೇರಿ/ಸ್ಥಳಗಳಿಗೆ ಬೇಡಿಕೆಯೂ ಹೆಚ್ಚುತ್ತಿದ್ದು, ನಗರದಲ್ಲಿ ತಮ್ಮದೆ ಆದ ಸ್ವಂತ ವ್ಯವಹಾರವನ್ನು ಹೊಂದ ಬಯಸುವವರು, ಸ್ಥಿರ ಬಾಡಿಗೆ ಹುಡುಕುವ ಹೂಡಿಕೆದಾರರಿಗೆ "ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್" ವಾಣಿಜ್ಯ ಮಳಿಗೆಯು ಸೂಕ್ತ ಸ್ಥಳವಾಗಿದೆ. ಇನ್ಲ್ಯಾಂಡ್ ಸಂಸ್ಥೆಯು ಉತ್ಕೃಷ್ಟ ಗುಣಮಟ್ಟಕ್ಕೆ ಸದಾ ಆದ್ಯತೆಯನ್ನು ನೀಡುತ್ತಿದ್ದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೌಲ್ಯಾಧಾರಿತ ಸೇವೆ ಒದಗಿಸಲು ಟೀಮ್ ಇನ್ಲ್ಯಾಂಡ್ ಸದಾಬದ್ದವಾಗಿರುತ್ತದೆ. ಅಲ್ಲದೇ ಸಂಸ್ಥೆಯ ನಿರ್ದೇಶಕರುಗಳಾದ ಸಿವಿಲ್ ಇಂಜಿನಿಯರ್ ಮೆರಾಜ್ ಯೂಸಫ್ ಸಿರಾಜ್ ಮತ್ತು ಆರ್ಕಿಟೆಕ್ಚರ್ ಪದವೀಧರರಾದ ವಹಾಜ್ ಯೂಸಫ್ ಸಿರಾಜ್ರವರು ತಮ್ಮ ನುರಿತ ಅನುಭವವನ್ನು ಈ ಯೋಜನೆಯ ನಿರ್ಮಾಣದಲ್ಲಿ ಹಂಚಿಕೊಂಡಿರುವುದು ಗಮನಾರ್ಹ ವಿಷಯವೆಂದು ಸಂಸ್ಥೆಯ ವ್ಯವಸ್ಥಾಪಕ ಮತ್ತು ಆಡಳಿತ ನಿರ್ದೇಶಕರಾದ ಸಿರಾಜ್ ಅಹ್ಮದ್ರವರು ತಿಳಿಸಿದರು.
ಆಧುನಿಕ ಕಚೇರಿಗಳು ಯಾವಾಗಲೂ ಗ್ರಾಹಕರನ್ನು ಆಕರ್ಷಿಸುವಲ್ಲಿ ಮತ್ತು ವ್ಯವಹಾರವನ್ನು ಯಶಸ್ವಿಯಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ''ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್'' ತನ್ನ 2ನೇ ಮಹಡಿಯನ್ನು ಸಂಪೂರ್ಣವಾಗಿ ಕ್ಲಿನಿಕ್, ಫಾರ್ಮಸಿ ಮತ್ತು ಡಯೋಗ್ನಸ್ಟಿಕ್ ಕೇಂದ್ರಗಳಿಗೆ ಮೀಸಲಿಟ್ಟಿರುವುದರಿಂದ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಈ ವಾಣಿಜ್ಯ ಯೋಜನೆಯು ಈಗಾಗಲೇ ರೆರಾದಿಂದ ಅನುಮೋದನೆಯನ್ನು ಪಡೆದಿರುತ್ತದೆ. ಈ ಯೋಜನೆಯು ಪೂರ್ಣಗೊಳ್ಳಲು 3 ವರ್ಷಗಳು ಬೇಕಾಗಿದ್ದು ಖರೀದಿದಾರರಿಗೆ ತನ್ನ ಹಣಕಾಸಿನ ಹೂಡಿಕೆಯನ್ನು ಕ್ರಮಬದ್ಧವಾಗಿ ಕಂತಿನರೂಪದಲ್ಲಿ ಪಾವತಿಸಲು ಅವಕಾಶವಿದ್ದು, ಅನುಕೂಲಕರವಾದ ವ್ಯವಸ್ಥೆಯನ್ನು ಮಾಡಬಹುದಾಗಿದೆ. ''ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್'' ಅತ್ಯಾಕರ್ಷಕವಾದ ಲೋಂಚಿಂಗ್ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯು ಮಾರುಕಟ್ಟೆ ಬೆಲೆಗಿಂತ ಕಡಿಮೆಯಾಗಿದ್ದು ಕೆಲವೇ ದಿನಗಳಿಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಉತ್ತಮ ಗುಣಮಟ್ಟದ ವಾಣಿಜ್ಯ ಮಳಿಗೆಯನ್ನು ಹೊಂದಲು ಈ ಸದಾವಕಾಶವನ್ನು ಸದುಪಯೋಗಪಡಿಸಬೇಕೆಂದು ಗ್ರಾಹಕರನ್ನು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ www.inlandbuilders.net ನ್ನು / 9880138015, 9972089099, 9972014055 ಸಂಪರ್ಕಿಸಬಹುದಾಗಿದೆ.