ಕಾಸರಗೋಡು, ಡಿ.16 (DaijiworldNews/MB) : ಜಿಲ್ಲಾ ಪಂಚಾಯತ್ನ 14 ವಾರ್ಡ್ಗಳಲ್ಲಿ ಯುಡಿಎಫ್ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಐದು ಕಡೆಗಳಲ್ಲಿ ಎಲ್ಡಿಎಫ್ ಮುನ್ನಡೆಯಲ್ಲಿದೆ. ಎನ್ಡಿಎ ಒಂದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ವರ್ಕಾಡಿ, ದೇಲಂಪಾಡಿ, ಚಿತ್ತಾರಿಕ್ಕಾಲ್, ಪಿಲಿಕ್ಕೋಡ್, ಪೆರಿಯ, ಉದುಮ, ಸಿವಿಲ್ ಸ್ಟೇಷನ್, ಕುಂಬಳೆಯಲ್ಲಿ ಯುಡಿಎಫ್ ಮುನ್ನಡೆಯಲ್ಲಿದೆ.
ಪುತ್ತಿಗೆ, ಬೇಡಡ್ಕ, ಕಳ್ಳಾರ್, ಕರಿಂದಲ, ಚೆರ್ವತ್ತೂರಿನಲ್ಲಿ ಎಲ್ಡಿಎಫ್ ಮುನ್ನಡೆಯಲ್ಲಿದ್ದು, ಎನ್ಡಿಎ ಎಡನೀರು ಮತ್ತು ಎಲ್ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಚೆಂಗಳದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಸರಗೋಡು ನಗರಸಭೆಯಲ್ಲಿ ಯುಡಿಎಫ್ 13, ಎನ್ಡಿಎ 8 ಮೇಲುಗೈ ಸಾಧಿಸಿದ್ದು, ಎಲ್ಡಿಎಫ್ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ.
ಕಾಞಂಗಾಡ್ ನಗರಸಭೆಯಲ್ಲಿ ಎಲ್ಡಿಎಫ್ 12, ಯುಡಿಎಫ್ 5, ಎಂಡಿಎ 2 ಮತ್ತು ನೀಲೇಶ್ವರ ನಗರಸಭೆಯಲ್ಲಿ ಯುಡಿಎಫ್ 2, ಎಲ್ಡಿಎಫ್ 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.